ದೆಹಲಿ ಮಾಜಿ ಸಿಎಂ ಶೀಲ ದೀಕ್ಷಿತ್‌ರ ಮನೆ ಬಾಡಿಗೆ ಪಡೆದ ರಾಹುಲ್‌ ಗಾಂಧಿ?

masthmagaa.com:

ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರೋ ಕಾರಣಕ್ಕೆ ಸರ್ಕಾರದ ಅಧಿಕೃತ ನಿವಾಸ ಖಾಲಿ ಮಾಡಿರೋ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಹೊಸ ಮನೆ ಹುಡುಕಾಟದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಮೊಘಲ್‌ ರಾಜ ಹುಮಾಯೂನ್‌ ಸಮಾಧಿ ಹಿಂಬದಿ ಇರೋ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವ್ರ ಮನೆಯನ್ನ ಬಾಡಿಗೆ ತೆಗೆದುಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅದಕ್ಕೂ ಮೊದಲು ಆ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ಸಂಬಂಧಿಸಿದ ಕ್ಲಿಯರೆನ್ಸ್‌ ಪಡೆಯೋಕೆ ಕಾಯುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ರಾಹುಲ್ ಅವರಿಗೆ ಕೇಂದ್ರ ಸರ್ಕಾರ Z+ ಭದ್ರತೆ ನೀಡಿದ್ದು, ಹೊಸ ಸ್ಥಳದಲ್ಲಿ ವಾಸಕ್ಕಾಗಿ ಹೋಗುವ ಮುನ್ನ NOC ಪಡೆಯಬೇಕಾಗುತ್ತದೆ. ಅಂದ್ಹಾಗೆ ನಿಜಾಮುದ್ದೀನ್‌ ರೆಸಿಡೆನ್ಶಿಯಲ್‌ ಏರಿಯಾದಲ್ಲಿರೋ 3BHK ಮನೆ ಶೀಲಾ ಅವ್ರ ಕುಟುಂಬಕ್ಕೆ ಸೇರಿದ್ದು, ಶೀಲಾ ದೀಕ್ಷಿತ್‌ ಅವ್ರು ತಮ್ಮ ಕೊನೆ ದಿನಗಳನ್ನ ಅಲ್ಲಿಯೇ ಕಳೆದಿದ್ರು. ಇದೀಗ ಈ ಮನೆಯನ್ನ ರಾಹುಲ್‌ ಬಾಡಿಗೆಗೆ ಪಡೆಯಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ರಾಹುಲ್‌ ತಮ್ಮ ತಾಯಿ ಸೋನಿಯಾ ಗಾಂಧಿಯವರ ಜೊತೆಯಲ್ಲಿ ಜನಪಥ್‌ ನಿವಾಸದಲ್ಲಿದ್ದು, ಬಾಡಿಗೆ ಮನೆಗೆ ತೆರಳುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

-masthmagaa.com

Contact Us for Advertisement

Leave a Reply