ಅಗ್ನಿವೀರ್‌ ಸ್ಕೀಮ್‌ ನೇಮಕಾತಿ ರದ್ದು ಮಾಡ್ತೀವಿ: ರಾಹುಲ್‌ ಗಾಂಧಿ

masthmagaa.com:

ಕೇಂದ್ರ ಸರ್ಕಾರದ ಅಗ್ನಿವೀರ್‌ ಸ್ಕೀಮ್‌ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವ್ರು ಹೇಳಿಕೆ ನೀಡಿದ್ದಾರೆ. ಚೀನಾ ಸೈನಿಕರಿಗೆ ಅಗ್ನಿವೀರ್‌ ಸೈನಿಕರಿಂದ ಟಕ್ಕರ್‌ ಕೊಡೋಕೆ ಸಾಧ್ಯವಿಲ್ಲ ಅಂತ ಟೀಕಿಸಿದ್ದಾರೆ. ಮಧ್ಯ ಪ್ರದೇಶದ ಶಾಹದೋಲ್‌ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್‌ ರ‍್ಯಾಲಿ ವೇಳೆ ಮಾತನಾಡಿದ ಅವ್ರು, ʻಅಗ್ನಿವೀರ್‌ ಯೋಜನೆಯಡಿ ನೇಮಕಗೊಂಡವರಿಗೆ ಕೇವಲ 6 ತಿಂಗಳ ಟ್ರೈನಿಂಗ್‌ ನೀಡಲಾಗುತ್ತೆ ಅಷ್ಟೇ. ಆದ್ರೆ ಚೀನಾ ಸೈನಿಕರಿಗೆ ಬರೋಬ್ಬರಿ 5 ವರ್ಷಗಳ ಟ್ರೈನಿಂಗ್‌ ಕೊಡಲಾಗುತ್ತೆ. ಸೋ ಅವ್ರನ್ನ ಎದುರಿಸೋಕೆ ಅಗ್ನಿವೀರ್‌ ಸೈನಿಕರಿಂದ ಆಗಲ್ಲ. ಇನ್ನು ಬೇರೆ ಸೈನಿಕರಂತೆ ಪೆನ್ಶನ್‌, ಕ್ಯಾಂಟೀನ್‌ ಫೆಸಿಲಿಟಿ, ಹುತಾತ್ಮ ಪಟ್ಟ ಕೂಡ ಸಿಗಲ್ಲ. ಆದ್ರಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಇದ್ರ ನೇಮಕಾತಿಯನ್ನೇ ರದ್ದು ಮಾಡ್ತೀವಿʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply