ಪುಣೆಯಲ್ಲಿ ಉಗ್ರಜಾಲ: ಶಂಕಿತ ಉಗ್ರನಿಗೆ ಬಲೆ ಬೀಸಿದ NIA

masthmagaa.com:

ಭಾರತದ ಉತ್ತರ ರೈಲ್ವೇ ವಲಯದ ಕ್ಲರ್ಕ್‌ ಒಬ್ಬನಿಗೆ ಐಸಿಸ್‌ ಉಗ್ರರ ಜೊತೆ ಲಿಂಕ್‌ ಇರೋ ಶಂಕೆಯ ಹಿನ್ನೆಲೆ ರಾಷ್ಟ್ರೀಯ ತನಿಖಾ ದಳ NIA ಆತನನ್ನ ಹಿಡಿಯೋಕೆ ಬಲೆ ಬೀಸಿದೆ. ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಪುಣೆಯಲ್ಲಿ NIA ರೇಡ್‌ ನಡೆಸಿ 15 ಮಂದಿ ಶಂಕಿತ ಉಗ್ರರನ್ನ ಅರೆಸ್ಟ್‌ ಮಾಡಿತ್ತು. ಆನಂತರ ಮೋಸ್ಟ್‌ ವಾಂಟೆಡ್‌ ಸ್ಲೀಪರ್‌ ಸೆಲ್‌-‌ ಉಗ್ರ ಮೊಹಮದ್ ಶಹ್ನಾವಾಕ್‌ ದೆಹಲಿ ಪೊಲೀಸರ ಸ್ಪೆಷಲ್‌ ಸೆಲ್‌ಗೆ ಸಿಕ್ಕಿ ಬಿದ್ದಿದ್ದ. NIA ಈತನನ್ನ ಹಿಡಿದು ಕೊಟ್ಟೋರಿಗೆ 5 ಲಕ್ಷ ರೂಪಾಯಿಗಳ ಬಹುಮಾನ ಅನೌನ್ಸ್‌ ಮಾಡಿತ್ತು. ಇವರೆಲ್ಲರನ್ನು ವಿಚಾರಣೆಗೆ ಒಳಪಡಿಸಿದಾಗ ರೈಲ್ವೇ ಡಿಪಾರ್ಟ್‌ನಲ್ಲಿ ಕೆಲಸ ಮಾಡ್ತಿರೋ UP ಮೂಲದ ಕ್ಲರ್ಕ್‌ ಒಬ್ಬ ತಮಗೆ ಹಾಗೂ ಐಸಿಸ್‌ಗೆ ಫಂಡ್‌ ಮಾಡ್ತಿದ್ದ ಅಂತ ಬಾಯ್ಬಿಟ್ಟಿದ್ದಾರೆ. ತನಿಖೆ ನಡೆಸಿದಾಗ ಈತ ಮೂಲತಃ ಹಿಂದೂ ಆಗಿದ್ದು, ಇಸ್ಲಾಂಗೆ ಮತಾಂತರಗೊಂಡಿದ್ದ. ಫೇಕ್‌ ಡಾಕ್ಯುಮೆಂಟ್‌ಗಳ್ನ ನೀಡಿ ರೈಲ್ವೆಗೆ ಸೇರಿದ್ದ ಅನ್ನೋ ಮಾಹಿತಿ ಬಯಲಾಗಿದೆ. ಈಗ NIA ಈತನನ್ನ ಹಿಡಿಯೋಕೆ ಸ್ಕೆಚ್‌ ಹಾಕಿದೆ.

-masthmagaa.com

Contact Us for Advertisement

Leave a Reply