ಮತ್ತೆ ಮಳೆ ಆರ್ಭಟ: ರಾಜ್ಯದ ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

masthmagaa.com:

ದೇಶದಲ್ಲಿ ವರುಣನ ಆರ್ಭಟ ಮತ್ತೆ ಶುರುವಾಗಿದೆ. ಉತ್ತರ ಪ್ರದೇಶ, ದಿಲ್ಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ನಿನ್ನೆ ಭಾರಿ ಮಳೆಯಾಗಿದೆ. ಮಳೆಯ ಹೊಡೆತಕ್ಕೆ ಉತ್ತರ ಪ್ರದೇಶದಲ್ಲಿ 9 ಜನ ಮೃತಪಟ್ಟಿದ್ದಾರೆ. ಲಕ್ನೋ, ನೊಯ್ಡಾ, ಗಾಜಿಯಾಬಾದ್‌, ಕಾನ್ಪುರ್‌ ಮತ್ತು ಆಗ್ರಾಗಳಲ್ಲಿ 7 ನೇ ತರಗತಿವರೆಗೆ ಶಾಲೆಗಳನ್ನ ಮುಚ್ಚಲಾಗಿದೆ. ಅಲಿಗರ್‌ನಲ್ಲಿ 12ನೇ ತರಗತಿವರೆಗೆ ಎಲ್ಲ ಶಾಲೆಗಳನ್ನ ಅಕ್ಟೋಬರ್‌ 12 ರವರೆಗೆ ಬಂದ್‌ ಮಾಡಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ದಿಲ್ಲಿಯಲ್ಲಿ ಸತತ ಮೂರು ದಿನಗಳಿಂದ ಸುರಿತಿರೊ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಕಟ್ಟಡವೊಂದು ಕುಸಿದು 3 ಜನ ಸಾವನ್ನಪ್ಪಿದ್ದಾರೆ. ಇನ್ನು ನಿರಂತರವಾಗಿ ಸುರಿಯುತ್ತಿರೊ ಮಳೆ ದಿಲ್ಲಿಗೆ ಈ ವರ್ಷದ 2ನೇ ಶುದ್ದ ಗಾಳಿಯನ್ನ ನೀಡಿದೆ ಅಂತ ಹೇಳಲಾಗಿದೆ. ಕಳೆದ 24 ಗಂಟೆಗಳಲ್ಲಿ ದಿಲ್ಲಿ ಏರ್‌ ಕ್ವಾಲಿಟಿ ಇಂಡೆಕ್ಸ್‌ 48ಕ್ಕೆ ಇಳಿದಿದೆ. ಅಂದ್ಹಾಗೆ ಸೆಪ್ಟಂಬರ್‌ 16ರಂದು ಏರ್‌ ಕ್ಯಾಲಿಟಿ ಇಂಡೆಕ್ಸ್‌ 47ಕ್ಕೆ ಇಳಿದು ವರ್ಷದ ಮೊದಲ ಶುದ್ದ ಗಾಳಿ ಅಂತ ಕರೆಸಿಕೊಂಡಿತ್ತು. ಇನ್ನು ಭಾರತೀಯ ಹವಾಮಾನ ಇಲಾಖೆ ದಿಲ್ಲಿ, ಯುಪಿ, ಕರ್ನಾಟಕ ಹಾಗೂ ತಮಿಳುನಾಡಿ ರಾಜ್ಯಗಳಿಗೆ ಮುಂದಿನ 24 ಗಂಟೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಇವತ್ತು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನಾರಾಯಣಪುರ ಎಂಬಲ್ಲಿ ಅತಿಹೆಚ್ಚು 128 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಎಲವು ಭಾಗಗಳಲ್ಲಿ ಕಡಿಮೆ ಹಾಗೂ ಸಾಧಾರಣ ಮಳೆಯಗುವ ಸಾಧ್ಯತೆಯಿದೆ. ಉಳಿದಂತೆ ಕೆಲ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ನ್ನ ಜಾರಿ ಮಾಡಿದೆ.

-masthmagaa.com

Contact Us for Advertisement

Leave a Reply