ರಾಯ್ಸೀನಾ ಡೈಲಾಗ್‌: ಭಾರತಕ್ಕೆ ಗ್ರೀಸ್‌ ಪ್ರಧಾನಿ ಭೇಟಿ!

masthmagaa.com:

ದೆಹಲಿಯಲ್ಲಿ  ಕಾನ್ಫರೆನ್ಸ್‌ ಫೆಬ್ರುವರಿ 21 ರಂದು ಪ್ರಾರಂಭಗೊಂಡು ಫ್ರೆಬ್ರುವರಿ 23ರವರೆಗೆ ನಡೆಯಲಿದೆ. ಈ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗೋಕೆ ಗ್ರೀಸ್‌ ಪ್ರಧಾನಿ ಕಿರಿಯಕೊಸ್‌ಮಿಟ್ಸೊಟಕಿಸ್‌ ಭಾರತಕ್ಕೆ ಇದೀಗ ಭೇಟಿ ನೀಡಿದ್ದಾರೆ. ಇವ್ರನ್ನ ದೆಹಲಿಯ ರಾಷ್ಟ್ರಪತಿ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಮಾಡ್ಕೊಂಡಿದ್ದಾರೆ. ಅಂದ್ಹಾಗೆ ಕಿರಿಯಕೊಸ್‌ಮಿಟ್ಸೊಟಕಿಸ್‌ ಅವ್ರು ರಾಯ್ಸೀನಾ ಡೈಲಾಗ್‌ ಕಾನ್ಫೋರೆನ್ಸ್‌ನ ಮುಖ್ಯ ಅತಿಥಿಗಳಾಗಿದ್ದಾರೆ. ಇವ್ರ ಈ ಭೇಟಿ ವೇಳೆ ಭಾರತ ಮತ್ತು ಗ್ರೀಸ್‌ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗುತ್ತೆ ಎನ್ನಲಾಗಿದೆ. ಇನ್ನು ಮುಖ್ಯವಾದ ಅಂಶವಂದ್ರೆ ಬರೋಬ್ಬರಿ 15 ವರ್ಷಗಳ ನಂತ್ರ ಗ್ರೀಸ್‌ ಪ್ರಧಾನಿ ಭಾರತಕ್ಕೆ ಭೇಟಿ ನೀಡ್ತಿರೋದು. ಇದಕ್ಕೂ ಮುಂಚೆ 2008ರಲ್ಲಿ ಗ್ರೀಸ್‌ ಪ್ರಧಾನಿ ಭಾರತಕ್ಕೆ ವಿಸಿಟ್‌ ನೀಡಿದ್ರು.

ಇನ್ನೊಂದ್ಕಡೆ ನರೇಂದ್ರ ಮೋದಿಯವ್ರು ಫೆಬ್ರುವರಿ 20 ರಂದು ಜಮ್ಮು & ಕಾಶ್ಮೀರದ ಸಾಂಬಾದಲ್ಲಿ ನೂತನ AIIMS ಮೆಡಿಕಲ್‌ ಕಾಲೇಜ್‌ ಉದ್ಘಾಟನೆ ಮಾಡಿದ್ದಾರೆ. ಇನ್ನು ಫೆಬ್ರುವರಿ 25 ರಂದು ಗುಜರಾತ್‌ನ ರಾಜ್‌ಕೋಟ್‌, ಆಂಧ್ರ ಪ್ರದೇಶದ ಮಂಗಳಗಿರಿ, ಪಂಜಾಬ್‌ನ ಬಟಿಂಡಾ, ಉತ್ತರ ಪ್ರದೇಶದ ರಾಯ್ಬರೇಲಿ ಮತ್ತು ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿನ AIIMS ಮೆಡಿಕಲ್‌ ಕಾಲೇಜ್‌ ಉದ್ಘಾಟಿಸಲಿದ್ದಾರೆ.

-masthmagaa.com

Contact Us for Advertisement

Leave a Reply