ಹಳೇ ಗೆಳತಿ ಹೆಸರನ್ನೇ ಸಿನಿಮಾಗೆ ಇಟ್ಟ ರಾಮ್‌ ಗೋಪಾಲ್‌ ವರ್ಮಾ !

-masthmagaa.com:

ಒಂದಿಷ್ಟು ಜನ ಹುಡುಗರು ಹುಡುಗಿ ಬಿಟ್ಟೊದ್‌ಮೇಲು ಅವರ ನೆನಪಲ್ಲೇ ಇರ್ತಾರೆ. ಪಾಸ್‌ವರ್ಡ್‌ಗೆ ಹುಡುಗಿ ಹೆಸರನ್ನ ಹಾಕೋಳೋದು, ಮಗಳಿಗೆ ಹಳೇ ಹುಡುಗಿ ಹೆಸರಿಡೋದು ಇದಂತು ನೆಕ್ಸ್ಟ್‌ ಲೆವೆಲ್‌ ಬಿಡಿ. ಸಾಮಾನ್ಯ ಜನರು ಈ ರೀತಿ ಮಾಡ್ತಾರೆ. ರಾಮ್‌ ಗೋಪಾಲ್‌ ವರ್ಮಾ ಅವರು ಏನ್‌ ಮಾಡಿದ್ರು ಗೊತ್ತಾ? , ಹೇಳಿ ಕೇಳಿ ಡೈರೆಕ್ಟರ್‌, ಕೇಳ್ಬೇಕಾ , ಒಂದು ಹೆಜ್ಜೆ ಮುಂದೆ ಇರ್ತಾರೆ. ಹಾಗಾದ್ರೆ ರಾಮ್‌ ಗೋಪಾಲ್‌ ವರ್ಮಾ ಅವರು ತನ್ನ ಹಳೇ ಗೆಳತಿ ನೆನಪಿಗೋಸ್ಕರ ಒಂದು ಮೂವಿಗೆ ಅವಳ ಹೆಸರನ್ನೇ ಇಟ್ಟಿದ್ರಂತೆ. ಹಾಗಾದ್ರೆ ಆ ಮೂವಿ ಯಾವುದು ? ಏನ್‌ ಕತೆ ಎಲ್ಲಾವನ್ನ ನೋಡ್ತಾ ಹೋಗೋಣ.

ಈ ಸಿನಿಮಾ ರಿಲೀಸ್‌ ಆಗಿ ಈಗ 25 ವರ್ಷಗಳಾಗಿದೆ. 25 ವರ್ಷಗಳ ನಂತ್ರ ಒಂದು ಇಂಟರ್‌ವ್ಯೂನಲ್ಲಿ ಈ ಸಿನಿಮಾ ಬಗ್ಗೆ ಆರ್‌ಜಿವಿ ಮಾತನಾಡಿದ್ದಾರೆ. ಮನೋಜ್ ಭಾಜಪೇಯಿ, ಸೌರಭ್ ಶುಕ್ಲಾ, ಮಕರಂದ್ ದೇಶಪಾಂಡೆ ಅಂಥಹಾ ಅದ್ಭುತ ನಟರನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಬಾಲಿವುಡ್​ಗೆ ಹೇಳಿಕೊಟ್ಟ ಆ ಸಿನಿಮಾ ಹಿಂದಿ ಆಲ್‌ ಟೈಮ್‌ ಹಿಟ್‌ ಮೂವಿಗಳಲ್ಲಿ ಒಂದಾಗಿದೆ. 1998ರಲ್ಲಿ ರಿಲೀಸ್‌ ಅದ ಸತ್ಯ ಮೂವಿ ಇಡೀ ಇಂಡಸ್ಟ್ರಿಯಲ್ಲೇ ಸಂಚಲನ ಮೂಡಿಸಿತ್ತು. ಈ ಸಿನಿಮಾದ ಹೆಸರಿನ ಹಿಂದಿನ ಗುಟ್ಟೇನು ಅನ್ನೋ ಬಗ್ಗೆ ರಾಮ್‌ ಗೋಪಾಲ್‌ ವರ್ಮಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಕಾಲೇಜಿನಲ್ಲಿದ್ದಾಗ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದರಂತೆ ಆ ಹುಡುಗಿಯ ಹೆಸರು ಸತ್ಯ. ಆಕೆಯ ನೆನಪಿಗಾಗಿಯೇ ಸಿನಿಮಾಕ್ಕೆ ಸತ್ಯ ಎಂದು ಹೆಸರಿಟ್ಟರಂತೆ. ಸಿನಿಮಾದಲ್ಲಿ ನಾಯಕನ ಹೆಸರು ಸತ್ಯ ಆ ಪಾತ್ರವನ್ನು ಜೆಡಿ ಚಕ್ರವರ್ತಿ ಮಾಡಿದ್ದಾರೆ. ನನಗೆ ಸತ್ಯ ಎಂದು ಹೆಸರಿಡುವ ಬೇರೆ ಏನೂ ಕಾರಣ ಇರಲಿಲ್ಲ, ಅವಳಿಗಾಗಿ ಆ ಹೆಸರು ಇಟ್ಟೆ. ಚಕ್ರವರ್ತಿ ಪಾತ್ರಕ್ಕೆ ಸತ್ಯ ಎಂದು ಹೆಸರಿಟ್ಟು ನಾಯಕನ ಹೆಸರಿನ ಸಿನಿಮಾ ಅಂತ ಮಾಡಿದೆ” ಅಂತ ರಾಮ್‌ ಗೋಪಾಲ್‌ ವರ್ಮಾ ಹೇಳಿದ್ದಾರೆ. ಯೋಚಿಸಿ, ಸತ್ಯ ಸಿನಿಮಾ ಅಪ್ಪಟ ಭೂಗತ ಲೋಕದ ಕತೆಯುಳ್ಳ ಸಿನಿಮಾ ಆದರೆ ಇಟ್ಟಿದ್ದು ಪ್ರೇಯಸಿಯ ಹೆಸರು. ಸಂದರ್ಶನದಲ್ಲಿ ಹಾಜರಿದ್ದ ನಟ ಸೌರಭ್ ಶುಕ್ಲ, ಹಳೇ ಪ್ರೇಯಸಿ ಮೇಲೆ ದ್ವೇಷ ತೀರಿಸಿಕೊಳ್ಳಲು ಭೂಗತ ಲೋಕದ ಸಿನಿಮಾಕ್ಕೆ ಅವಳ ಹೆಸರಿಟ್ಟಿದ್ದಾರೆ ಅಂತ ವರ್ಮಾರ ಕಾಲು ಎಳೆದು ತಮಾಷೆ ಮಾಡಿದರು.

ಮೂವಿ ಅನ್ನೊದು ಕೆಲವೊಬ್ಬರ ಭಾವನೆಗಳಾಗಿರತ್ತೆ, ಕೆಲವರಿಗೆ ಲೈಫ್‌ ಆಗಿರತ್ತೆ, ಇನ್ನು ಕೆಲವರಿಗೆ ಎಂಟರ್‌ಟೈನ್‌ಮೆಂಟ್‌ ಆಗಿರತ್ತೆ. ಯಾರಿಗೆ ಯಾವುದು ಅನ್ನೋದು ಅವರವರ ಜೀವನಕ್ಕೆ ಬಿಟ್ಟ ವಿಚಾರ. ಏನೇ ಆಗಿದ್ರು ಕೂಡ ಕೊನೆಯಲ್ಲಿ ರಾಮ್‌ ಗೋಪಾಲ್‌ ವರ್ಮಾ ಅವರ ಹಳೇ ಹುಡುಗಿ ಮಾತ್ರ ಎಷ್ಟೇ ವರ್ಷ ಕಳೆದ್ರು ಹಿಟ್‌ ಮೂವಿ ಲಿಸ್ಟ್‌ ಅಲ್ಲಿ ಇರ್ತಾರೆ.

-masthmagaa.com

Contact Us for Advertisement

Leave a Reply