ರಾಮ ನವಮಿ: ಅಯೋಧ್ಯೆ ಬಾಲರಾಮನ ಮೇಲೆ ಸೂರ್ಯಸ್ಪರ್ಶಿ

masthmagaa.com:

ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಂತ್ರ ಅಯೋಧ್ಯೆಯಲ್ಲಿ ಮೊದಲ ರಾಮ ನವಮಿಯನ್ನ ಅದ್ದೂರಿಯಾಗಿ ಆಚರಿಸಲಾಗಿದೆ. ರಾಮ ನವಮಿ ಪ್ರಯುಕ್ತ ಇಂದು ಅಯೋಧ್ಯೆಯ ಬಾಲರಾಮನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ. ಸೂರ್ಯನ ಕಿರಣ ನೇರವಾಗಿ ಕೇವಲ ಬಾಲರಾಮನ ಹಣೆಗೆ ಬೀಳುವಂತೆ ಮಾಡಲಾಗಿದೆ. ಈ ಸೂರ್ಯರಶ್ಮಿ 58 ಮಿಮೀ ಗಾತ್ರವಿದ್ದು, ಬಾಲ ರಾಮನ ಹಣೆಯ ಮೇಲೆ ಹೊಳೆಯೋ ತಿಲಕದಂತೆ ಕಾಣಿಸಿದೆ. ಈ ಹಿಂದೆ ವಿಜ್ಞಾನಿಗಳು ಇದ್ರ ಪ್ರಯೋಗ ನಡೆಸಿದ್ದು, ಈ ವಿಧಾನ ಇದೀಗ ಯಶಸ್ವಿಯಾಗಿ ನೆರವೇರುವಂತಾಗಿದೆ. ಇನ್ನು ಸೂರ್ಯರಶ್ಮಿ ಬಾಲರಾಮನ ಹಣೆಯ ಮೇಲೆ ಬೀಳೋದನ್ನ ಪ್ರಧಾನಿ ನರೇಂದ್ರ ಮೋದಿಯವ್ರು ಕೂಡ ಕಣ್ತುಂಬಿಕೊಂಡಿದ್ದಾರೆ. ವಿಮಾನದಲ್ಲಿ ಕೂತು ತಮ್ಮ ಟ್ಯಾಬ್‌ ಮೂಲಕ ವೀಕ್ಷಿಸಿದ್ದಾರೆ.

-masthmagaa.com

Contact Us for Advertisement

Leave a Reply