ಪಕ್ಷದಿಂದ ಕಿತ್ತು ಎಸೆಯಬೇಕು..! ಸಿದ್ದು ವಿರುದ್ಧ ಸಿಡಿದ ಸಾಹುಕಾರ..!

ಒಬ್ಬರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ನಿರ್ನಾಮ ಮಾಡ್ತಿದ್ದಾರೆ ಅಂತ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಒಬ್ಬರು ತನ್ನ ಸ್ವಾರ್ಥಕ್ಕಾಗಿ ಪಕ್ಷವನ್ನೇ ನಿರ್ನಾಮ ಮಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ್ದಾರೆ. ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಈಗಲೇ ಅವನ್ನು ಪಕ್ಷದಿಂದ ಕಿತ್ತು ಎಸೆಯದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಅಂತ ಕೆಂಡಕಾರಿದ್ದಾರೆ. ಅಲ್ಲದೆ ಹೈಕಮಾಂಡ್ ಈಗಲೇ ಈ ಬಗ್ಗೆ ಗಮನ ಹರಿಸಬೇಕು. ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ನಮ್ಮನ್ನು ಅವರ ಶಿಷ್ಯ ಎಂದು ಹೇಳುತ್ತಿದ್ದರು. ಆದ್ರೆ ಒಮ್ಮೆಯೂ ನಮ್ಮನ್ನು ಕರೆಸಿ ಮಾತನಾಡಲಿಲ್ಲ. ಹೈಕಮಾಂಡ್ ಕೂಡ ನಮಗೆ ತಿಳಿ ಹೇಳಲಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ 80 ಸ್ಥಾನಗಳು ಬಂದಿವೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಬಾರಿ 30 ಕ್ಷೇತ್ರಗಳಲ್ಲೂ ಗೆಲುವು ಕಷ್ಟ ಅಂತ ಹೇಳಿದ್ದಾರೆ.

Contact Us for Advertisement

Leave a Reply