masthmagaa.com:

ರಮೇಶ್ ಜಾರಕಿಹೊಳಿ ವಿಡಿಯೋ ಮಾಡಿಸಿದ್ದು ಕಾಂಗ್ರೆಸ್​ನವರೇ, ಇಂತಹ ಮನೆಹಾಳ್ ಕೆಲಸ ಮಾಡೋದು ಕಾಂಗ್ರೆಸ್​ನವರೇ ಅಂತ ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್ ಹೇಳಿದ್ದಾರೆ. ನಾನು 20 ವರ್ಷ ಕಾಂಗ್ರೆಸ್​ನಲ್ಲಿದ್ದೆ. ಕಾಂಗ್ರೆಸ್​ನವರ ಬಂಡವಾಳ ನನಗೆ ಚೆನ್ನಾಗಿ ಗೊತ್ತು. ಅವರ ನೈತಿಕತೆ, ಅನೈತಿಕತೆ ಗೊತ್ತು. ಮೈತ್ರಿ ಸರ್ಕಾರ ಬೀಳಿಸಿದವರನ್ನ ಟಾರ್ಗೆಟ್ ಮಾಡಿ ಹೀಗೆ ಮಾಡಲಾಗಿದೆ. ಬೇಕಿದ್ರೆ ರಾಜಕೀಯದಲ್ಲಿ ಹೋರಾಡೋಣ. ತಾಕತ್ತಿದ್ರೆ ರಮೇಶ್​ ಜಾರಕಿಹೊಳಿ ವಿರುದ್ಧ ಚುನಾವಣೆಗೆ ನಿಲ್ಲಿ.. ಅಥವಾ ನನ್ನ ವಿರುದ್ಧ ನಿಲ್ಲಿ.. ರಾಜಕೀಯವಾಗಿ ಫೈಟ್ ಮಾಡೋಣ. ಅದನ್ನ ಬಿಟ್ಟು ಇದನ್ನೆಲ್ಲಾ ಮಾಡ್ಬೇಡಿ. ಸಿಬಿಐ ತನಿಖೆಯಾದ್ರೆ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನೋದು ಹೊರಗೆ ಬರುತ್ತೆ ಅಂತ ಎಸ್​.ಟಿ. ಸೋಮಶೇಖರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply