ಮೊಬೈಲ್‌ ರಿಪೇರಿಗೆ ಕೊಟ್ಟು NIA ಕೈಗೆ ಸಿಕ್ಕಿ ಬಿದ್ದ ಕೆಫೆ ಸ್ಪೋಟಕದಾರಿಗಳು

masthmagaa.com:

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ NIA ವಶದಲ್ಲಿರೋ ಇಬ್ಬರು ಆರೋಪಿಗಳಾದ ಮುಸ್ಸಾವಿರ್‌ ಹುಸೇನ್‌ ಶಾಜೀಬ್‌ ಮತ್ತು ಅಬ್ದುಲ್‌ ಮತೀನ್‌ ತಾಹಾ ಬಗ್ಗೆ ಒಂದಷ್ಟು ವಿಚಾರಗಳು ಬಯಲಾಗಿವೆ. ಈ ಇಬ್ರೂ ತಾವು ಪೊಲೀಸ್‌ ಕೈಗೆ ಸಿಗಬಾರ್ದು ಅಂತೇಳಿ ಪದೇ ಪದೇ ಫೋನ್‌, ಸಿಮ್‌ ಕಾರ್ಡ್‌ ಮತ್ತು ಐಡಿಗಳನ್ನ ಬದಲಾಯಿಸ್ತಿದ್ರು. ಆದ್ರೆ ಕೊಲ್ಕತ್ತಾದಲ್ಲಿ ತಮ್ಮ ಹಾಳಾದ ಮೊಬೈಲ್‌ ಒಂದನ್ನ ರಿಪೇರಿ ಮಾಡೋಕಂತ ನೀಡೋಕೋದಾಗ ಟ್ರ್ಯಾಕ್‌ ಆಗಿದ್ದಾರೆ. ಟೆಕ್ನಿಕಲ್‌ ಸಮಸ್ಯೆ ಇರೋದ್ರಿಂದ ಮೊಬೈಲನ್ನ ಇಲ್ಲೇ ಬಿಟ್ಟು ಹೋಗಿ ರಿಪೇರಿ ಮಾಡಿ ಕೊಡ್ತೀವಿ ಅಂತ ಅಂಗಡಿ ಮಾಲೀಕರು ಹೇಳಿದ್ರು. ಸೋ ಆರೋಪಿಗಳು ಹಾಗೇ ಮಾಡಿ, ಮೊಬೈಲ್‌ ಇಟ್ಟು ಹೋಗಿದ್ದಾರೆ. ಅದ್ರಿಂದ NIA ತಂಡಕ್ಕೆ ಒಂದ್‌ ರೀತಿನಲ್ಲಿ ಮೇಜರ್‌ ಸುಳಿವು ಸಿಕ್ಕಿದೆ. ಯಾಕಂದ್ರೆ ಮೊಬೈಲ್ ರಿಪೇರಿ ಮಾಡೋಕೆ ಮುಂದಾದ ಅಂಗಡಿಯವ್ರು, ಮೈಕ್ರೋಫೋನ್‌ ಚೆಕ್‌ ಮಾಡೋಕೆ ಸಿಮ್‌ ಕಾರ್ಡ್‌ ಇನ್ಸರ್ಟ್‌ ಮಾಡಿದ್ದಾರೆ. ಹೀಗೆ ಮಾಡಿದ್ದೇ ತಡ…ಫೋನ್‌ನ IMEI ನಂಬರ್‌ ಹೊಂದಿದ್ದ ತನಿಖಾಧಿಕಾರಿಗಳಿಗೆ ತಕ್ಷಣ ಅಲರ್ಟ್‌ ಸಿಕ್ಕಿದೆ. ಕೂಡಲೇ NIA ತಂಡ ಅಂಗಡಿಯವ್ರನ್ನ ಕಾಂಟ್ಯಾಕ್ಟ್‌ ಮಾಡಿ ಮಾಹಿತಿ ಪಡೆದಿದ್ದಾರೆ. ಸೋ ಈ ಮೂಲಕ ಖುದ್ದು ಆರೋಪಿಗಳೇ ತಮ್ಮ ಬಗ್ಗೆ ಸುಳಿವು ನೀಡಿ ಸಿಕ್ಕಿ ಬಿದ್ದಿದ್ದಾರೆ.

-masthmagaa.com

Contact Us for Advertisement

Leave a Reply