ರಷ್ಯಾದ ರಾಜಧಾನಿ ಮೇಲೆ ಡ್ರೋನ್‌ ದಾಳಿ ಮಾಡಿದ ಯುಕ್ರೇನ್‌?

masthmagaa.com:

ರಷ್ಯಾ- ಯುಕ್ರೇನ್‌ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ತಾನೆ ಇದ್ದು, ಉಭಯ ದೇಶಗಳು ತಮ್ಮ ದಾಳಿ ಪ್ರತಿದಾಳಿಯನ್ನ ಮುಂದುವರೆಸಿವೆ. ಇದೀಗ ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಯುಕ್ರೇನ್‌ ಡ್ರೋನ್‌ ದಾಳಿ ಮಾಡಿದೆ ಅಂತ ರಷ್ಯಾ ಆರೋಪಿಸಿದೆ. ಮಾಸ್ಕೋದ ಹಲವು ಕಟ್ಟಡಗಳ ಮೇಲೆ ಡ್ರೋನ್‌ ದಾಳಿಯಾಗಿದ್ದು, ಚಿಕ್ಕದಾಗಿ ಡ್ಯಾಮೇಜ್‌ ಆಗಿದೆ. ಸೀರಿಯಸ್‌ ಆಗಿ ಏನು ಆಗಿಲ್ಲ ಅಂತ ಅಲ್ಲಿನ ಮೇಯರ್‌ ತಿಳಿಸಿದ್ದಾರೆ. ಜೊತೆಗೆ ದಾಳಿಯನ್ನ ಎದುರಿಸಲು ಎಲ್ಲಾ ರೀತಿಯ ತುರ್ತು ವ್ಯವಸ್ಥೆಯನ್ನ ಮಾಡಿಕೊಂಡಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಅಂತ ರಷ್ಯಾ ಅಧಿಕೃತ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ. ಇನ್ನು ಮಾಸ್ಕೋ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 10 ಡ್ರೋನ್‌ಗಳನ್ನ ಹೊಡೆದುರುಳಿಸಲಾಗಿದೆ ಅಂತ ರಷ್ಯಾ ಹೇಳಿದೆ.

-masthmagaa.com

Contact Us for Advertisement

Leave a Reply