ಧೋನಿಯ ಹೆಲಿಕಾಪ್ಟರ್ ಶಾಟ್ ಕಾಪಿ ಮಾಡಿದ ರಶೀದ್ ಖಾನ್..!

masthmagaa.com:

ಕ್ರಿಕೆಟ್​ನಲ್ಲಿ ಎಂ.ಎಸ್​. ಧೋನಿ ಎಷ್ಟು ಪ್ರಸಿದ್ಧಿ ಪಡೆದಿದ್ದಾರೋ ಅವರ ಹೆಲಿಕಾಪ್ಟರ್​ ಶಾಟ್​ ಕೂಡ ಅಷ್ಟೇ ಜನಪ್ರಿಯವಾಗಿದೆ. ಹೀಗಾಗಿ ಗಲ್ಲಿ ಕ್ರಿಕೆಟ್​ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್​ವರೆಗೆ ಯಾರೇ ಹೆಲಿಕಾಪ್ಟರ್​ ಶಾಟ್​ ಹೊಡೆದ್ರೂ ಧೋನಿ ಶಾಟ್ ಜೊತೆ ಹೋಲಿಕೆ ಮಾಡಲು ಶುರುವಾಗುತ್ತೆ. ಇದರ ನಡುವೆಯೇ ಅಫ್ಘನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್​ ತಾವು ಹೊಡೆದ ಹೆಲಿಕಾಪ್ಟರ್​ ಶಾಟ್​ನ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಶೀದ್​ ಖಾನ್​ರ ಹೆಲಿಕಾಪ್ಟರ್​ ಶಾಟ್​ಗೆ ಕೀಪರ್ ಹಿಂದೆ ಸಿಕ್ಸ್​ ಹೋಗಿದೆ. ಇದರ ವಿಡಿಯೋ ಹಂಚಿಕೊಂಡಿರೋ ಆಫ್ಘನ್ ಕ್ರಿಕೆಟರ್, ನೀವು ಇದನ್ನ ಹೆಲಿಕಾಪ್ಟರ್ ಶಾಟ್ ಅಂತ ಕರೀತೀರಾ..? ನಾನಂತೂ ಕರೀತೀನಿ ಅಂತ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಹ ಆಟಗಾರ ಹಮಿದ್ ಹಸನ್​ ‘ನಿಂಜಾ ಕಟ್​’ ಅಂತ ಹೇಳಿದ್ದಾರೆ.

-masthmagaa.com

https://twitter.com/rashidkhan_19/status/1234502280688222208

Contact Us for Advertisement

Leave a Reply