ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ ಮಿಂಚಿಂಗ್..!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅವರಿಗೆ ಜೊತೆಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ, ಮಹೇಶ್ ಬಾಬು ಅವರ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಜೊತೆಗೆ ಪೂಜಾ ಹೆಗ್ಡೆ ಮತ್ತು ತಮನ್ನಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ವಿಶೇಷ ಪಾತ್ರಗಳಲ್ಲಿ ಈ ನಟಿಯರು ನಟಿಸಿದ್ದಾರೆ. ಇನ್ನು ಪೂಜಾ ಹೆಗ್ಡೆಗೆ ಇದೇ ಮೊದಲಲ್ಲ. ಅವರು ಈ ಹಿಂದೆ ಮಹರ್ಷಿ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ನಟಿಸಿದ್ದರು. ಈಗ ಮತ್ತೆ 2ನೇ ಬಾರಿ ಮಹೇಶ್ ಬಾಬು ಜೊತೆ ಮಿಂಚಲಿದ್ದಾರೆ. ಆದ್ರೆ ಯಾವ ಪಾತ್ರ ಅನ್ನೋದು ಮಾತ್ರ ಇನ್ನೂ ತಿಳಿದುಬಂದಿಲ್ಲ.

Contact Us for Advertisement

Leave a Reply