ಮತ್ತೆ ಜನರಿಗೆ ಶಾಕ್‌ ನೀಡಿದ ಆರ್‌ಬಿಐ, ರೆಪೊ ದರದಲ್ಲಿ ಮತ್ತೆ ಏರಿಕೆ!

masthmagaa.com:

ಹಣದುಬ್ಬರವನ್ನ ಕಂಟ್ರೋಲ್‌ಗೆ ತರಲು ಕೇಂದ್ರ ಸರ್ಕಾರ ನಾನಾ ಪ್ರಯತ್ನ ಮಾಡ್ತ ಇದೆ. ಈ ನಡುವೆಯೇ ಆರ್‌ಬಿಐ ಈಗ ಮತ್ತೆ ರೆಪೊ ದರವನ್ನ 50 ಬೇಸಿಸ್‌ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ. ಇದ್ರೊಂದಿಗೆ ಬಡ್ಡಿದರ ಈಗ 4.90% ಕ್ಕೆ ಏರಿಕೆಯಾಗಿದೆ. ಹಣದುಬ್ಬರದ ಒತ್ತಡ ಮತ್ತು ಹೆಚ್ಚಿನ ಪೂರೈಕೆ ಆಘಾತಗಳ(Supply Chain) ಹಿನ್ನೆಲೆಯಲ್ಲಿ ದರಗಳನ್ನು ಹೆಚ್ಚಿಸಲು ವಿತ್ತೀಯ ನೀತಿ ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ ಅಂತ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಅಂದ್ಹಾಗೆ, ರೆಪೊ ದರ ಅಂದ್ರೆ, ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಹಣಕ್ಕೆ ವಿಧಿಸುವ ಬಡ್ಡಿ. ರಿವರ್ಸ್‌ ರೆಪೊ ದರ ಅಂದ್ರೆ, ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇಟ್ಟಿರುವ ಹಣಕ್ಕೆ ಆರ್‌ಬಿಐ ನೀಡುವ ಬಡ್ಡಿ. ಮಾರುಕಟ್ಟೆಯಲ್ಲಿ ಹಣಕಾಸಿನ ಸಮತೋಲನ ಕಾಯ್ದುಕೊಳ್ಳಲು ಆರ್‌ಬಿಐ ಈ ಕ್ರಮಗಳನ್ನ ಕೈಗೊಳ್ತಾ ಇರುತ್ತೆ. ಆದ್ರೆ ಕಳೆದ ಮೇ 4 ರಂದು ಕೂಡ ಆರ್‌ಬಿಐ ರೆಪೋ ದರವನ್ನ 40 ಬೇಸಿಸ್‌ ಪಾಯಿಂಟ್‌ಗಳಷ್ಟು ಏರಿಕೆ ಮಾಡಿತ್ತು. ಈಗ ಮತ್ತೆ ಏರಿಕೆ ಮಾಡಿರೋದು ಜನರಿಗೆ ಆಘಾತ ತಂದಿದೆ. ಯಾಕಂದ್ರೆ ರೆಪೊ ದರ ಏರುತ್ತಿದ್ದ ಹಾಗೆಯೇ ಗೃಹಸಾಲದ ಬಡ್ಡಿದರಗಳು, ಇಎಂಐಗಳು, ವಾಹನ ಸಾಲಗಳು, ವೈಯಕ್ತಿಕ ಸಾಲದ ಬಡ್ಡಿದರಗಳು ಕೂಡ ಏರಿಕೆ ಆಗಲಿವೆ. ಬ್ಯಾಂಕ್‌ ಬಜಾರ್‌ನ ಸಿಇಓ ಆದಿಲ್‌ ಶೆಟ್ಟಿ ಅವ್ರ ಪ್ರಕಾರ ಗೃಹ ಸಾಲದ ಬಡ್ಡಿದರ ಜೂನ್‌ನಲ್ಲಿ 7.6 %ಗೆ ಏರಿಕೆ ಅಗಲಿವೆ ಅಂತ ಹೇಳಿದ್ದಾರೆ.
ಈ ಹಣಕಾಸು ವರ್ಷಾರಂಭದಿಂದ ಹಣದುಬ್ಬರವು ಆರ್‌ಬಿಐನ ಶೇಕಡಾ 2 ರಿಂದ ಶೇಕಡಾ 6ರ ಗುರಿಗಿಂತ ಹೆಚ್ಚಾಗಿದೆ. ಇತ್ತೀಚಿನ ಲಭ್ಯವಿರುವ ಮಾಹಿತಿ ಪ್ರಕಾರ, ಭಾರತದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರ ಏಪ್ರಿಲ್‌ನಲ್ಲಿ ಎಂಟು ವರ್ಷಗಳ ಗರಿಷ್ಠ ಶೇಕಡಾ 7.79ಕ್ಕೆ ಏರಿದೆ. ಜನವರಿ 2022 ರಿಂದ ಇದು ಶೇಕಡಾ 6ಕ್ಕಿಂತ ಹೆಚ್ಚಿದೆ.

-masthmagaa.com

Contact Us for Advertisement

Leave a Reply