ಅನರ್ಹ ಶಾಸಕರ ಭವಿಷ್ಯ ಏನಾಗುತ್ತೋ ಏನೋ..?

ದೋಸ್ತಿ ಸರ್ಕಾರ ಪತನಕ್ಕೆ ಕಾರಣವಾದ ಅನರ್ಹ ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಜೊತೆಗೆ 15 ವಿಧಾನಸಭೆ ಕ್ಷೇತ್ರದ ಬೈ ಎಲೆಕ್ಷನ್‍ಗೆ ದಿನಾಂಕ ನಿಗದಿ ಮಾಡಿರುವ ಚುನಾವಣಾ ಆಯೋಗದ ಕ್ರಮಕ್ಕೆ ತಡೆ ನೀಡುವಂತೆಯೂ ಅನರ್ಹ ಶಾಸಕರು ಮನವಿ ಮಾಡಲಿದ್ದಾರೆ. ಹಾಗಾಗಿ ಅನರ್ಹ ಶಾಸಕರ ಪಾಲಿಗೆ ಇಂದು ನಿರ್ಣಾಯಕ ದಿನವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ದೆಹಲಿಗೆ ತೆರಳಿರುವ ಅನರ್ಹ ಶಾಸಕರು ಭವಿಷ್ಯ ಉಳಿಸಿಕೊಳ್ಳಲು ಸರ್ಕಸ್ ಮಾಡ್ತಿದ್ದಾರೆ. ಸಿಎಂ ಯಡಿಯೂರಪ್ಪ, ಡಿಸಿಎಂಗಳಾದ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ ಕೂಡ ಅನರ್ಹ ಶಾಸಕರ ಬೆನ್ನಿಗಿದ್ದಾರೆ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆಗೂ ಯಡಿಯೂರಪ್ಪ ಮಾತನಾಡಿದ್ದಾರೆ ಅಂತ ಹೇಳಲಾಗಿದೆ. ಈ ಮಧ್ಯೆ ಅನರ್ಹ ಶಾಸಕರು ವಕೀಲರೊಂದಿಗೆ ಚರ್ಚಿಸಿ ಚುನಾವಣಾ ಆಯೋಗದ ತೀರ್ಮಾನಕ್ಕೆ ತಡೆ ನೀಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಲು ಕೋರಿದ್ದಾರೆ. ಇನ್ನು ಪ್ಲ್ಯಾನ್ ಬಿ ಬಗ್ಗೆಯೂ ಬಿಜೆಪಿ ನಾಯಕರು ಹಾಗೂ ಅನರ್ಹರು ಚರ್ಚಿಸಿದ್ದಾರೆ. ಕೋರ್ಟ್ ಈ ವಾದವನ್ನು ಪರಿಗಣಿಸದಿದ್ದರೆ ಅನರ್ಹರು ಸೂಚಿಸಿದ ವ್ಯಕ್ತಿಗಳನ್ನು ಕಣಕ್ಕಿಳಿಸಲು ನಿಲುವಿಗೆ ಬರಲಾಗಿದೆ.

Contact Us for Advertisement

Leave a Reply