ಶಕ್ತಿ ಯೋಜನೆ ಕಾರಣದಿಂದ ಬಸ್‌ಗಳಲ್ಲಿ ಮಹಿಳೆಯರ ಹಾವಳಿ: ಟಿಕೆಟ್‌ ನೀಡಲು ಹರಸಾಹಸಪಟ್ಟ ಕಂಡಕ್ಟರ್‌

masthmagaa.com:

ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರೋ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಯೋಜನೆಗೆ ಭರ್ಜರಿ ಸ್ಪಂದನೆ ಸಿಗ್ತಿದೆ. ಯೋಜನೆಗೆ ಚಾಲನೆ ಸಿಕ್ಕ ಕೇವಲ ಮೂರು ದಿನಗಳಲ್ಲಿ ಒಟ್ಟು 98,58,518 ಮಹಿಳೆಯರು ರಾಜ್ಯದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದರ ಒಟ್ಟು ವೆಚ್ಚ 21.06 ಕೋಟಿ ರೂ. ಆಗಿದೆ. ಮಹಿಳೆಯರು ಬಸ್‌ ಹಿಡಿದಿರೋದ್ರಿಂದ ಪ್ರಮುಖ ನಗರಗಳ ರೈಲ್ವೆ ಮತ್ತು ವೋಲ್ವೋ ಬಸ್‌ಗಳ ಟಿಕೆಟ್​​ ಹಣ ಸಂಗ್ರಹಕ್ಕೆ ಹೊಡೆತ ಬಿದ್ದಿದೆ. ಅಲ್ದೆ ಯಾತ್ರಾ ಸ್ಥಳಗಳಿಗೆ ಮಹಿಳೆಯರು ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಬಸ್‌ಗಳಲ್ಲಿ ಜನದಟ್ಟಣೆ ಉಂಟಾಗಿದೆ. ಹಾಗೇ ಬಸ್​ನಲ್ಲಿ ಮಹಿಳೆಯರೇ ತುಂಬಿಕೊಂಡಿದ್ದರಿಂದ ಕಂಡಕ್ಟರ್ ಟಿಕೆಟ್ ನೀಡಲು ಹರಸಾಹಸ ಪಡುವಂತಾಗಿದೆ.​ ಅಫಜಲಪುರದಿಂದ ಬ್ಯಾಡಗಿ ಬಸ್​ನ ಕಂಡಕ್ಟರ್​ ಒಬ್ರು ಸೀಟ್ ಮೇಲೆ ಹತ್ತಿ ಪ್ರಯಾಣಿಕರಿಗೆ ಟಿಕೆಟ್ ಕೊಡ್ತಿರೋ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

-masthmagaa.com

Contact Us for Advertisement

Leave a Reply