2040ಕ್ಕೆ ರಿಲಯನ್ಸ್‌ ಇಂಡಸ್ಟ್ರಿಸ್‌ ಮಾರುಕಟ್ಟೆ ಬಂಡವಾಳ $1 ಟ್ರಿಲಿಯನ್?

masthmagaa.com:

2040ರ ವೇಳೆಗೆ ರಿಲಯನ್ಸ್‌ ಇಂಡಸ್ಟ್ರಿಯ ಮಾರುಕಟ್ಟೆ ಬಂಡವಾಳ ಅಥವಾ ಮಾರ್ಕೆಟ್‌ ಕ್ಯಾಪಿಟಲೈಸೇಶನ್‌ ಒಂದು ಟ್ರಿಲಿಯನ್‌ ಡಾಲರ್‌ ತಲುಪಿಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. CNBC-TV18‌ ತನ್ನ ಡೇಟಾ ಅನಾಲಿಸಿಸ್‌ನಲ್ಲಿ ಇದನ್ನ ಪ್ರೆಡಿಕ್ಟ್‌ ಮಾಡಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಥವಾ RIL, ಆದಾಯ, ಲಾಭ ಹಾಗೂ ಮಾರುಕಟ್ಟೆ ಬಂಡವಾಳದಲ್ಲಿ ಲೀಡಿಂಗ್‌ ಕಂಪನಿಯಾಗಿದೆ. ಆದ್ರಿಂದ $1 ಟ್ರಿಲಿಯನ್‌ ಗಡಿ ಮುಟ್ಟೋ ಕಂಪನಿಗಳ ಪೈಕಿ ಮುಂಚೂಣಿಯಲ್ಲಿದೆ. ಕಳೆದ 10 ವರ್ಷಗಳಲ್ಲಿ RILನ ರೆವೆನ್ಯೂ 8.3%ನ ರೇಟ್‌ನಲ್ಲಿ ಬೆಳವಣಿಗೆ ಕಂಡಿದೆ. ಅಂದ್ಹಾಗೆ ಪ್ರಪಂಚದಲ್ಲಿ $1 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಬಂಡವಾಳ ಹೊಂದಿರೋದು ಕೇವಲ 7 ಕಂಪನಿಗಳು. ಅವು, ಮೈಕ್ರೋಸಾಫ್ಟ್‌, ಆಪಲ್‌, ಸೌದಿ ಅರಾಮ್ಕೊ, ಎನ್‌ವಿಡಿಯಾ, ಗೂಗಲ್‌, ಅಮೆಜಾನ್‌ ಮತ್ತು ಮೆಟಾ. ಸದ್ಯ RIL $250ಬಿಲಿಯನ್‌ ಮಾರ್ಕೆಟ್‌ ಕ್ಯಾಪಿಟಲೈಸೇಶನ್‌ ಜೊತೆ 48ನೇ ಸ್ಥಾನದಲ್ಲಿದೆ. ಇದು ಭಾರತದ GDPಯ ಸುಮಾರು 6ರಿಂದ 7%ನಷ್ಟು.

-masthmagaa.com

Contact Us for Advertisement

Leave a Reply