ಸತತ 7ನೇ ಬಾರಿಗೆ ರೆಪೋ ರೇಟ್‌ ಯಥಾಸ್ಥಿತಿಯಲ್ಲಿ ಮುಂದುವರಿಕೆ!

masthmagaa.com:

ಕಳೆದ ಮೂರು ದಿನಗಳಿಂದ ಮಾನಿಟರಿ ಪಾಲಿಸಿ ಮೀಟಿಂಗ್‌ ನಡೆದಿದ್ದು, ಈಗ ಅದರ ರಿಸಲ್ಟ್‌ ಹೊರಬಿದ್ದಿದೆ. ಸತತ 7ನೇ ಬಾರಿಗೆ RBI ರೆಪೋ ರೇಟನ್ನ ಯಥಾ ಸ್ಥಿತಿಯಲ್ಲಿ ಮುಂದುವರೆಸಿದೆ. ರೆಪೋ ದರ 6.5%ನಲ್ಲೇ ಇರಲಿದೆ ಅಂತ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅನೌನ್ಸ್‌ ಮಾಡಿದ್ದಾರೆ. ಇನ್ನು 2025ರ ಆರ್ಥಿಕ ವರ್ಷದ GDP ಬೆಳವಣಿಗೆ ದರ 7% ಇರಲಿದೆ ಅಂತ RBI ಹೇಳಿದೆ. ಅಲ್ಲದೆ ಸದ್ಯಕ್ಕೆ ತಾಪಮಾನದ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಜಾಸ್ತಿಯಿರೋದು ಎಕಾನಮಿ ಮೇಲೆ ಇಂಪ್ಯಾಕ್ಟ್‌ ಮಾಡ್ಬೋದು. ಇದನ್ನ ಮಾನಿಟರ್‌ ಮಾಡಲಾಗುತ್ತೆ ಅಂದಿದ್ದಾರೆ. ಇನ್ನು ಹಣದುಬ್ಬರದ ಟಾರ್ಗೆಟ್‌ ರೀಚ್‌ ಮಾಡೋಕೆ ಹತ್ತಿರ ಆಗ್ತಿದ್ದೇವೆ. ಸದ್ಯ ಗ್ರಾಹಕ ದರ ಹಣದುಬ್ಬರ ಸುಮಾರು 4.5%ನಷ್ಟಿರಲಿದೆ ಅಂತ RBI ಹೇಳಿದೆ. ಅಲ್ಲದೆ ಭಾರತದ ವಿದೇಶಿ ವಿನಿಮಯ ನಿಧಿ ಕೂಡ ದಾಖಲೆ ಗರಿಷ್ಟ ಮಟ್ಟಕ್ಕೆ ತಲುಪಿದ್ದು, ಈಗ ಭಾರತದಲ್ಲಿ $645.6 ಬಿಲಿಯನ್‌ ಮೌಲ್ಯದ ಫೋರೆಕ್ಸ್‌ ರಿಸರ್ವ್ಸ್‌ ಇದೆ. ಅತ್ತ ಮಾನಿಟರಿ ಪಾಲಿಸಿ ಅನೌನ್ಸ್‌ಮೆಂಟ್‌ ನಂತರ ರೂಪಾಯಿ ಮೌಲ್ಯ ಕೂಡ ಜಾಸ್ತಿಯಾಗಿದ್ದು, ಈಗ ರೂಪಾಯಿ ಬೆಲೆ 83 ರೂಪಾಯಿ 39 ಪೈಸೆಗೆ ರೀಚ್‌ ಆಗಿದೆ.

ಇನ್ನು ಕ್ಯಾಶ್‌ ಡೆಪಾಸಿಟ್‌ ಮಷಿನ್‌ಗಳಲ್ಲಿ UPI ಸೇವೆ ಒದಗಿಸೋ ಪ್ರಪೋಸಲ್‌ನ್ನ RBI ಅನೌನ್ಸ್‌ ಮಾಡಿದೆ. ಅಂದ್ರೆ ಕಾರ್ಡ್‌ ಬದಲು UPI ಬಳಸಿ ಕ್ಯಾಶ್‌ ಡೆಪಾಸಿಟ್ ಮಾಡೋ ವ್ಯವಸ್ಥೆ.

-masthmagaa.com

Contact Us for Advertisement

Leave a Reply