ಅಮೆರಿಕ ಚುನಾವಣೆ ರೇಸ್‌! ನಿಕ್ಕಿ ಹ್ಯಾಲೆಗೆ ಭಾರೀ ಮುಖಭಂಗ!

masthmagaa.com:

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯ ರೇಸ್‌ಗೆ ವೋಟಿಂಗ್‌ ನಡೀತಿದ್ದು, ಇದೀಗ ನೇವಾಡ ಪ್ರೈಮರೀಸ್‌ ವೋಟಿಂಗ್‌ ಮುಕ್ತಾಯಗೊಂಡಿದೆ. ಆದ್ರೆ ಈ ನೇವಾಡ ವೋಟಿಂಗ್‌ನಿಂದ ರಿಪಬ್ಲಿಕನ್‌ ಪಾರ್ಟಿಯ ಟಾಪ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಮಾತ್ರ ಹೊರಗೆ ಉಳಿದಿದ್ದಾರೆ. ವೋಟಿಂಗ್‌ನಲ್ಲಿ ಭಾಗಿನೇ ಆಗಿಲ್ಲ. ಆದ್ರಿಂದ ಅವ್ರು ವೋಟರ್ಸ್‌ಗೆ ಕೂಡ ʻನೇವಾಡ ಪ್ರೈಮರೀಸ್‌ ಇಗ್ನೋರ್‌ ಮಾಡಿ, ವೋಟ್‌ ಮಾಡ್ಬೇಡಿ. ನನ್ನ ಹೆಸರು ಬ್ಯಾಲಟ್‌ನಲ್ಲಿ ಇಲ್ಲ. ಅಂದ್ರೆ ನಾನು ಕಾಂಟೆಸ್ಟ್‌ ಮಾಡ್ತಿಲ್ಲʼ ಅಂದಿದ್ದಾರೆ. ಇನ್ನು ಈ ನೇವಾಡ ಪ್ರೈಮರೀಸ್‌ನಲ್ಲಿ ಕಾಂಟೆಸ್ಟ್‌ ಮಾಡಿರೋ ರಿಪಬ್ಲಿಕನ್‌ ಪಾರ್ಟಿಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಭಾರೀ ಮುಖಭಂಗ ಅನುಭವಿಸಿದ್ದಾರೆ. ಯಾಕಂದ್ರೆ ಹೆಚ್ಚಿನ ರಿಪಬ್ಲಿಕನ್‌ ವೋಟರ್ಸ್‌ ʻನನ್‌ ಆಫ್‌ ದೀಸ್‌ ಕ್ಯಾಂಡಿಡೇಟ್ಸ್‌ʼ ಆಪ್ಶನ್‌ ಆಯ್ಕೆ ಮಾಡಿದ್ದಾರೆ. ಅಂದ್ರೆ ಯಾವೊಂದು ಅಭ್ಯರ್ಥಿಯನ್ನೂ ಆಯ್ಕೆ ಮಾಡಿಲ್ಲ.

-masthmagaa.com

Contact Us for Advertisement

Leave a Reply