ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಕೊನೆಗೂ ಬಾಯಿಬಿಟ್ಟ ರಿಯಾ ಚಕ್ರವರ್ತಿ!

masthmagaa.com:

ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವು ಇನ್ನೂ ಕೂಡ ನಿಗೂಢ ಆಗಿಯೇ ಇದೆ. ಅವರದ್ದು ಕೊಲೆನಾ ಅಥ್ವಾ ಆತ್ಮಹತ್ಯೆನಾ ಅನ್ನೋದು ಸಾಬೀತಾಗಿಲ್ಲ. ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ನಂತ್ರ ಅವರ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿಯೇ ಕೊಲೆ ಮಾಡಿಸಿದ್ದಾರೆ ಅನ್ನೋ ಆರೋಪವನ್ನ ಸುಶಾಂತ್‌ ಅವರ ಫ್ಯಾಮಿಲಿ ಮಾಡಿತ್ತು. ನಂತ್ರ ರಿಯಾ ಅವರು 3 ವರ್ಷಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ರು. ಬಾಲಿವುಡ್‌ನಲ್ಲಿ ಮಿಂಚಬೇಕು ಅಂತ ಅಂದ್ಕೊಂಡಿದ್ದ ನಟಿಗೆ ಸುಶಾಂತ್‌ ಅವರ ಸಾವು ಅಡ್ಡಗಾಲಿನ ರೀತಿ ಆಗೋಯ್ತು. ಸುಶಾಂತ್‌ ಮತ್ತು ರಿಯಾ ಬ್ರೇಪ್‌ಅಪ್‌ ಮಾಡಿಕೊಂಡ ಕೆಲವೇ ಕೆಲವು ದಿನಗಳಲ್ಲಿ ಸುಶಾಂತ್‌ ನಿಧನರಾಗಿದ್ರು. ಹಾಗಾಗಿ ಎಲ್ಲಾ ಡೌಟ್‌ಗಳು ರಿಯಾ ಮೇಲೆ ಬರೋಕೆ ಮುಖ್ಯ ಕಾರಣ. ಈಗ ರಿಯಾ ಚಕ್ರವರ್ತಿ ಮತ್ತೆ ಬಾಲಿವುಡ್‌ಗೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಎಂಟಿವಿ ರೋಡೀಸ್​ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮೌನ ಮುರಿದಿದ್ದಾರೆ. ಸುಶಾಂತ್‌ ನಿಧನದ ನಂತರ ತಮಗಾದ ಕಷ್ಟವನ್ನ ತೆರೆ ಮೇಲೆ ಹಂಚಿಕೊಂಡಿದ್ದಾರೆ.

‘ಜನರು ತುಂಬಾ ಮಾತನಾಡುತ್ತಾರೆ. ನನಗೆ ಅನೇಕ ಹಣೆಪಟ್ಟಿ ಕಟ್ಟಿದ್ದರು. ನನ್ನ ಬಗ್ಗೆಯೂ ಸಿಕ್ಕಾಪಟ್ಟೆ ಆಡಿಕೊಂಡಿದ್ದರು. ಅವರು ಕಟ್ಟಿದ ಹಣೆಪಟ್ಟಿಯನ್ನು ನಾನು ಒಪ್ಪಿಕೊಳ್ಳುತ್ತೇನಾ? ಅವರಿಂದಾಗಿ ನಾನು ಜೀವನದಲ್ಲಿ ಹಿಂದುಳಿಯುತ್ತೇನಾ? ಸಾಧ್ಯವೇ ಇಲ್ಲ. ಅಷ್ಟಕ್ಕೂ ಯಾರು ಅವರೆಲ್ಲ’ ಅಂತ ರಿಯಾ ಚಕ್ರವರ್ತಿ ಹೇಳಿದ್ದಾರೆ. ಒಂದಿಷ್ಟುಅಭಿಮಾನಿಗಳು ರಿಯಾ ಪರವಾಗಿ ಆಗಿಂದ ಈಗೀನ ತನಕವೂ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈಗಲೂ ಅವರ ಮಾತಿಗೆ ಸಪೋರ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply