ರಿಷಬ್‌ ಮಗಳನ್ನ ಹಾರೈಸಿದ ದರ್ಶನ್!

masthmagaa.com:

ಕಾಂತಾರ ಚಿತ್ರದ ಯಶಸ್ಸಿನ ಉತ್ತುಂಗದಲ್ಲಿರುವ ರಿಷಬ್‌ ಶೆಟ್ಟಿಯವರ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನ ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು. ʼರಾದ್ಯʼ ಬರ್ತ್‌ಡೇ ಸಡಗರಕ್ಕೆ ಸ್ಯಾಂಡಲ್‌ ವುಡ್‌ ತಾರೆಯರು ಭಾಗಿಯಾಗಿದ್ದರು. ಡಿ ಬಾಸ್‌ ಮತ್ತು ಅಭಿಶೇಕ್‌ ಅಂಬರೀಷ್‌ ಒಟ್ಟಿಗೆ ಸಮಾರಂಭಕ್ಕೆ ಆಗಮಿಸಿ ಮುದ್ದು ಮುದ್ದಾದ ರಾದ್ಯಳಿಗೆ ಉಡುಗರೆ ಕೊಟ್ಟು ಶುಭಾಶಯ ಕೋರಿದರು. ಆ್ಯಕ್ಶನ್‌ ಕಿಂಗ್‌ ಅರ್ಜುನ ಸರ್ಜಾ ಆ್ಯಕ್ಶನ್‌ ಪ್ರಿನ್ಸ್‌ ಧ್ರುವ ಸರ್ಜಾ, ಜೊತೆ ಜೊತೆಯಲಿ ಸಿರಿಯಲ್‌ ಖ್ಯಾತಿಯ ನಟ ಅನಿರುದ್ದ್‌ ಫ್ಯಾಮಿಲಿ, ನಟಿ ರಮ್ಯಾ ಹೀಗೆ ಅನೇಕ ಕಲಾವಿದರನ್ನ ಮತ್ತು ಸ್ನೇಹಿತರನ್ನ ಹುಟ್ಟುಹಬ್ಬದ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಇನ್ನೂ ಕಾಂತಾರ ಸಿನಿಮಾ ನಿರ್ದೇಶಿಸಿ, ನಟಿಸಿ ದೊಡ್ಡಮಟ್ಟದಲ್ಲಿ ಜನಪ್ರಿಯತೆ ಪಡೆದ ರಿಷಬ್‌ ಶೆಟ್ಟಿಯವರು ಬಹಳ ದಿನಗಳ ನಂತರ ಕುಟುಂಬ, ಸ್ಯಾಂಡಲ್‌ ವುಡ್‌ ಕಲಾವಿದರ ಜೊತೆಯಲ್ಲಿ ಸುಂದರ ಸಮಯ ಕಳೆದಿದ್ದಾರೆ. ಪುಟಾಣಿ ʼರಾದ್ಯಾʼಳ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೋಟೊ ಶೂಟ್‌ ಕೂಡ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply