ವಿಶ್ವಸಂಸ್ಥೆಯಲ್ಲಿ ರಿಷಬ್‌ ಶೆಟ್ಟಿ ಭಾಷಣಕ್ಕೆ ತಡೆ! ಕಾರಣವೇನು?

masthmagaa.com:

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕನ್ನಡದಲ್ಲಿ ಮಾತಾಡಿದ್ದಾರೆ. ಆದ್ರೆ ತಾಂತ್ರಿಕ ಸಮಸ್ಯೆಯಿಂದಾಗಿ ಅವರ ಭಾಷಣವನ್ನ ಮೊಟಕುಗೊಳಿಸಲಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ 28ನೇ ಸಭೆಯಲ್ಲಿ ರಿಷಬ್‌ ಪರಸರ ಸಂರಕ್ಷಣೆ ವಿಷಯವಾಗಿ ಭಾಷಣ ಮಾಡಲಿದ್ರು. ಭಾಷಣವನ್ನ ಕನ್ನಡದಲ್ಲೇ ಆರಂಭಿಸಿದ್ರು. ಆದ್ರೆ ಅವರ ಭಾಷಣ ಇಂಗ್ಲೀಷ್‌ ಅಥ್ವಾ ಇನ್ಯಾವುದೇ ಭಾಷೆಗೆ ಟ್ರಾನ್ಸ್ಲೇಟ್‌ ಆಗದ ಕಾರಣ ಅವರ ಭಾಷಣವನ್ನ ಆರಂಭದಲ್ಲಿಯೇ ತಡೆಹಿಡಿಯಲಾಗಿದೆ. ಅಂದ್ಹಾಗೆ ವಿಶ್ವಸಂಸ್ಥೆಯಲ್ಲಿ ಯಾವುದೇ ಭಾಷೆಯಲ್ಲಿ ಭಾಷಣ ಮಾಡುವ ಅವಕಾಶವಿದೆ. ಭಾಷಣವನ್ನ ಇಂಗ್ಲೀಷ್‌ ಸೇರಿದಂತೆ ವಿಶ್ವಸಂಸ್ಥೆಯ ಅನುಮೋದನೆ ಇರುವ ಇತರ ಕೆಲ ಭಾಷೆಗಳಿಗೆ ಟ್ರಾನ್ಸ್‌ಲೇಟ್‌ ಮಾಡಿ ಪ್ರಸಾರ ಮಾಡಲಾಗುತ್ತೆ. ಆದ್ರೆ ರಿಷಬ್‌ ಶೆಟ್ಟಿ ಮಾಡಿದ ಭಾಷಣ ತಾಂತ್ರಿಕ ಸಮಸ್ಯೆಯಿಂದ ಟ್ರಾನ್ಸ್‌ಲೇಟ್‌ ಆಗಿ ಪ್ರಸಾರ ಆಗಲಿಲ್ಲ. ಹೀಗಾಗಿ ಅವರ ಭಾಷಣವನ್ನ ತಡೆ ಹಿಡಿದು, ಬೇರೊಬ್ಬ ಸ್ಪೀಕರ್‌ಗೆ ಅವಕಾಶ ನೀಡಲಾಯ್ತು. ಸೋ ರಿಷಬ್‌ ಕೇವಲ 12 ಸೆಕೆಂಡ್‌ ಮಾತ್ರ ಮಾತಾಡಿದ್ದಾರೆ ಅಂತ ಮಾಹಿತಿ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply