ಬ್ರಿಟನ್‌ ಕ್ಯಾಬಿನೆಟ್‌ಗೆ ಮಿನಿ ಆಪರೇಷನ್‌ ಮಾಡೋಕೆ ಮುಂದಾದ ರಿಷಿ ಸುನಾಕ್!‌

masthmagaa.com:

ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅವ್ರು ತಮ್ಮ ಕ್ಯಾಬಿನೆಟ್‌ನಲ್ಲಿ ಕೆಲವು ಬದಲಾವಣೆ ಮಾಡೋಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಬ್ರಿಟನ್‌ನಲ್ಲಿ ಉಂಟಾಗಿರೋ ಆರ್ಥಿಕ ಬಿಕ್ಕಟ್ಟನ್ನ ಪರಿಹರಿಸೋಕೆ ಹಾಗೂ ಮುಂದಿನ ಜನರಲ್‌ ಎಲೆಕ್ಶನ್‌ನ್ನ ಗಮನದಲ್ಲಿ ಇಟ್ಕೊಂಡು ಕೆಲ ಇಲಾಖೆಗಳನ್ನ ರೀಶಫಲ್‌ ಮಾಡಿ ನೂತನ ಇಲಾಖೆಗಳನ್ನ ಸುನಾಕ್‌ ಸೃಷ್ಟಿಸಲಿದ್ದಾರೆ ಅಂತ ಸುದ್ದಿಯಾಗಿದೆ. ಇನ್ನೊಂದ್ ವರದಿಯ ಪ್ರಕಾರ‌ Business, Energy and Industrial Strategy (BEIS) ಉದ್ಯಮ ಸಂಸ್ಥೆಯನ್ನ ಟ್ರೇಡ್‌ ಡಿಪಾರ್ಟ್‌ಮೆಂಟ್‌ ಜೊತೆ ವಿಲೀನ ಮಾಡಿ, ನೂತನ ಸೈನ್ಸ್‌ ಅಂಡ್‌ ಡಿಜಿಟಲ್‌ ಯುನಿಟ್‌ ಸ್ಥಾಪಿಸೋಕೆ ಸುನಾಕ್‌ ಪ್ಲಾನ್‌ ಮಾಡ್ತಿದಾರೆ ಅಂತ ಹೇಳಲಾಗ್ತಿದೆ. ಆದರೆ ಈ ಬಗ್ಗೆ ಸುನಾಕ್‌ರ ಅಧಿಕೃತ ನಿವಾಸ ಡೌನಿಂಗ್‌ ಸ್ಟ್ರೀಸ್‌ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply