ಜಿಡಿಪಿ ಅಂದ್ರೆ ಗ್ಯಾಸ್​, ಡೀಸೆಲ್, ಪೆಟ್ರೋಲ್: ರಾಹುಲ್ ಗಾಂಧಿ ಹೊಸ ಬಾಣ

masthmagaa.com:

ಇನ್ನು ಬೆಲೆ ಏರಿಕೆ ಖಂಡಿಸಿ ಮಾತನಾಡಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿಜಿ ಯಾವಾಗ್​​ ನೋಡಿದ್ರೂ ಜಿಡಿಪಿ ಜಾಸ್ತಿಯಾಗ್ತಿದೆ ಅಂತಾರೆ. ಆಮೇಲೆ ಜಿಡಿಪಿ ಅಂದ್ರೆ ಏನು ಅಂತ ನಂಗೆ ಅರ್ಥ ಆಯ್ತು. ಜಿಡಿಪಿ ಅಂದ್ರೆ ಗ್ರಾಸ್​ ಡೊಮೆಸ್ಟಿಕ್ ಪ್ರಾಡಕ್ಟ್ ಅಲ್ಲ, ಅದು ಗ್ಯಾಸ್ ಡೀಸೆಲ್​ ಪೆಟ್ರೋಲ್​ ಅಂತ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, 2014ರಲ್ಲಿ ನಮ್ಮ ಸರ್ಕಾರ ಅಧಿಕಾರ ಬಿಟ್ಟು ಹೋಗುವಾಗ ಎಲ್​ಪಿಜಿ ಸಿಲಿಂಡರ್ ಬೆಲೆ 410 ರೂಪಾಯಿ ಇತ್ತು. ಈಗ ಅದು 800 ದಾಟಿ ಹೋಗಿದೆ. ಪೆಟ್ರೋಲ್ 71 ರೂಪಾಯಿ ಇತ್ತು. ಈಗ 100 ರೂಪಾಯಿ ದಾಟಿದೆ. ಡೀಸೆಲ್ 57 ರೂಪಾಯಿ ಇತ್ತು ಈಗ 88 ರೂಪಾಯಿ ದಾಟಿದೆ ಅಂತ ಹೇಳಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗಿರೋದ್ರಿಂದ ರೇಟ್​ ಜಾಸ್ತಿಯಾಗಿದೆ ಅಂತ ನೀವು ನನ್ನ ಬಳಿ ವಾದ ಮಾಡ್ಬೋದು. ಆದ್ರೆ ಕಚ್ಚಾತೈಲ ಮತ್ತು ಗ್ಯಾಸ್​ ಬೆಲೆ ಈಗಕ್ಕಿಂತ 2014ರಲ್ಲೇ ಜಾಸ್ತಿ ಇತ್ತು ಅಂತ ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರೋ ಬಿಜೆಪಿಯ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ಸರಿಯಾದ ಜ್ಞಾನನೇ ಇಲ್ಲದ ವಿಚಾರಗಳ ಬಗ್ಗೆ ಮಾತನಾಡಿದ್ಧಾರೆ. ಅವರಿಗೆ ಜಿಡಿಪಿಯ ನಿಜವಾದ ಅರ್ಥನೇ ಗೊತ್ತಿಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply