ಮರುಭೂಮಿಯಲ್ಲಿ 1.72 ಲಕ್ಷ ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಪತ್ತೆ..!

masthmagaa.com:

ಅಂತಾರಾಷ್ಟ್ರೀಯ ಸಂಶೋಧಕರ ತಂಡವು‌ ಶಿಲಾಯುಗದ ಕಾಲದಲ್ಲಿದ್ದ ನದಿಯೊಂದನ್ನು ಪತ್ತಿಹಚ್ಚಿದೆ. 1 ಲಕ್ಷದ 72 ಸಾವಿರ ವರ್ಷ ಹಳೆಯ ನದಿ ಇದಾಗಿದ್ದು, ವಿಶ್ವದ 17ನೇ ಅತಿ ದೊಡ್ಡ ಮರುಭೂಮಿಯಾಗಿರುವ ಥಾರ್‌ ಮರುಭೂಮಿಯ ನಡುವೆ ಹರಿದುಹೋಗುತ್ತಿತ್ತು ಎನ್ನಲಾಗಿದೆ. ಸದ್ಯ ಬರಡಾಗಿರುವ ಈ ಪ್ರದೇಶ ಅಂದಿನ ಕಾಲದ ಜನ-ಜೀವನಕ್ಕೆ ಪ್ರಮುಖ ಆಧಾರವಾಗಿತ್ತು ಅಂತ ಸಂಶೋಧಕರು ತಿಳಿಸಿದ್ದಾರೆ.

ವೇದಗಳ ಕಾಲದಲ್ಲಿದ್ದ ಸರಸ್ವತಿ ನದಿಯು ಕಾಲಕ್ರಮೇಣ ಬತ್ತಿ ಹೋಗಿದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ನದಿಯೂ ರಾಜಸ್ಥಾನದಲ್ಲೇ ಹರಿದುಹೋಗುತ್ತಿತು. ಸರ್ಕಾರ ಇದರ ಕುರುಹುಗಳನ್ನು ಪತ್ತೆಹಚ್ಚುವ ಕಾರ್ಯವನ್ನ ಮಾಡ್ತಾನೆ ಇದೆ. ಈಗ ಪತ್ತೆಯಾಗಿದೆ ಎನ್ನಲಾಗಿರೋ 1 ಲಕ್ಷ 72 ಸಾವಿರ ವರ್ಷ ಹಳೆಯ ನದಿಯ ಕುರುಹು, ಸರಸ್ವತಿ ನದಿ ಹುಡುಕಾಟಕ್ಕೆ ಹೊಸ ಆಯಾಮ ನೀಡ್ತಾ ಇದೆ.

masthmagaa.com

Contact Us for Advertisement

Leave a Reply