ಪ್ರಿಯಾಂಕಾ ಪತಿ ರಾಬರ್ಟ್​ ವಾದ್ರಾ ಕಾರಿಗೆ ದಂಡ! ಯಾಕೆ ಗೊತ್ತಾ..?

masthmagaa.com:

ಅಪಾಯಕಾರಿ ರೀತಿಯಲ್ಲಿ ಡ್ರೈವಿಂಗ್ ಮಾಡಿದ ಆರೋಪದಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್​ ವಾದ್ರಾ ಕಾರಿಗೆ ದಂಡ ವಿಧಿಸಲಾಗಿದೆ. ಬುಧವಾರ ಸೆಕ್ಯೂರಿಟಿ ಜೊತೆ ಕಚೇರಿಗೆ ಹೊರಟಿದ್ದ ವಾದ್ರಾ ಕಾರು ಇದ್ದಕ್ಕಿದ್ದಂತೆ ನಿಂತಿದೆ. ಈ ವೇಳೆ ಹಿಂದೆ ಬರುತ್ತಿದ್ದ ಕಾರು ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಅಪಾಯಕಾರಿ ಡ್ರೈವಿಂಗ್ ಆರೋಪದಡಿ ದಂಡ ವಿಧಿಸಿದ್ದೀವಿ ಅಂತ ದೆಹಲಿ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಾದ್ರಾ, ನಾನು ಡ್ರೈವಿಂಗ್ ಮಾಡ್ತಿರಲಿಲ್ಲ. ಹಿಂದಿನ ಸೀಟಲ್ಲಿ ಕೂತ್ಕೊಂಡು ಲ್ಯಾಪ್​ಟಾಪಲ್ಲಿ ಕೆಲ್ಸ ಮಾಡ್ತಿದ್ದೆ. ಬೇರೆಯವರಿಗೆ ಗುದ್ದೋದನ್ನ ತಪ್ಪಿಸೋಕೆ ಬ್ರೇಕ್ ಹಾಕಿದ್ದು ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply