5 ಕೋಟಿ ರೇಂಜ್‌ ರೋವರ್‌ ಖರೀದಿಸಿದ ರಾಕಿಂಗ್‌ ಸ್ಟಾರ್‌ ಯಶ್‌ !

masthmagaa.com:

ಹೊಸ ಕಾರ್‌ ತಗೊಂಡ ಖುಷಿಯಲ್ಲಿ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ಇದ್ದಾರೆ. ರೇಂಜ್ ರೋವರ್ ಕಾರು ತಂದಿದ್ದು ಇದರಲ್ಲಿ ರಿಜಿಸ್ಟರ್ಡ್ ಎಂದು ಬರೆದಿರುವುದನ್ನು ಕಾಣಬಹುದು. ತಮ್ಮ ಹೊಸ ಕಾರಿನ ಮುಂದೆ ಯಶ್ ದಂಪತಿ ಮಕ್ಕಳನ್ನು ಎತ್ತಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ರಾಕಿಂಗ್ ದಂಪತಿಗೆ ನೆಟ್ಟಿಗರು ಶುಭಾಶಯ ಹೇಳುತ್ತಿದ್ದಾರೆ.

ರಾಕಿ ಭಾಯ್ ಖರೀದಿಸಿರುವ ರೇಂಜ್ ರೋವರ್ ಸ್ಪೆಷಲ್ ಎಡಿಷನ್ ಬ್ಲ್ಯಾಕ್ ಕಾರಿನ ಬೆಲೆ ಸುಮಾರು 5 ಕೋಟಿ ಇದೆ ಎನ್ನಲಾಗ್ತಾ ಇದೆ. ರೇಂಜ್ ರೋವರ್ ಲಕ್ಷುರಿ ಹಾಗೂ ದುಬಾರಿ ಕಾರುಗಳಲ್ಲಿ ಒಂದಾಗಿದೆ.

-masthmagaa.com

Contact Us for Advertisement

Leave a Reply