ಬುಲೆಟ್‌ನ್ನೇ ಚಾಕಲೇಟ್‌ ಮಾಡಿಕೊಂಡು ತಿಂದ ರಾಕಿಂಗ್‌ ಸ್ಟಾರ್‌ ಯಶ್‌ !

masthmagaa.com:

ನಟ ಯಶ್‌ ʻಕೆಜಿಎಫ್‌ 2ʼ ಸಿನಿಮಾದ ನಂತರ ಜಾಹೀರಾತಿನಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಪೆಪ್ಸಿ ಬ್ರಾಂಡ್‌ನ ರಾಯಭಾರಿಯಾಗಿ ಜಾಹೀರಾತಿನಲ್ಲಿ ʻಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು ರೈಸ್‌ ಅಪ್‌ʼ ಎಂದು ಹೇಳಿ ಸಖತ್‌ ಸುದ್ದಿಯಲ್ಲಿದ್ದರು. ಕಳೆದ ವರ್ಷದಿಂದ ಮೆನ್‌ ಕಾಸ್ಮೆಟಿಕ್ಸ್‌ ವಿಲನ್ ಹೆಸರಿನ ಬ್ರಾಂಡ್‌ಗೆ ಯಶ್‌ ರಾಯಭಾರಿಯಾಗಿದ್ದಾರೆ. ಇದೀಗ ಅದರ ಹೊಸ ಜಾಹೀರಾತು ಬಿಡುಗಡೆಯಾಗಿದೆ. ಈ ಜಾಹೀರಾತಿನಲ್ಲಿ ಯಶ್ ಕಾರಿನ ಮೇಲೆ ಕುಳಿತಿರುತ್ತಾರೆ. ಆಗ ಗನ್​ನಿಂದ ಬುಲೆಟ್ ಫೈರ್ ಆಗುತ್ತದೆ. ಅದು ಕಾರಿನ ಗಾಜಿಗೆ ಹೊಡೆಯುತ್ತದೆ. ಬಳಿಕ ಮತ್ತೊಂದು ಬುಲೆಟ್‌ ಫೈರ್‌ ಆಗುತ್ತದೆ, ಆ ಬುಲೆಟ್ ಯಶ್ ಮುಖವನ್ನು ಸವರಿಕೊಂಡು ಹೋಗುತ್ತದೆ. ಆ ಬುಲೆಟ್ ಚಾಕೋಲೇಟ್ ಆಗಿ ಬದಲಾಗುತ್ತದೆ! ಅದನ್ನು ಯಶ್ ತಿನ್ನುತ್ತಾರೆ. ಯಶ್ ಅವರು ಬಳಕೆ ಮಾಡಿದ ಚಾಕೋಲೇಟ್ ಫ್ಲೇವರ್​ನ ಫೇಸ್​ವಾಶ್​ನಿಂದಲೇ ಬುಲೆಟ್ ಚಾಕೋಲೇಟ್ ಆಗಿ ಬದಲಾಗುತ್ತದೆ. ಅಂದರೆ ಆ ಫೇಸ್‌ವಾಶ್‌ನಿಂದ ಮುಖದ ತ್ವಚೆ ಚಾಕೋಲೇಟ್‌ನಂತೆ ಮೃದುವಾಗುತ್ತದೆ ಎನ್ನುವ ಅರ್ಥ ಕೊಡುತ್ತದೆ.

-masthmagaa.com

Contact Us for Advertisement

Leave a Reply