ರಾಯಲ್‌ ಎನ್ಫೀಲ್ಡ್‌ ಶಾಟ್‌ಗನ್‌ 650 ಮೋಟರ್‌ಬೈಕ್‌ ಬಿಡುಗಡೆ!

masthmagaa.com:

ರಾಯಲ್‌ ಎನ್ಫೀಲ್ಡ್‌ ತನ್ನ ನೂತನ ಶಾಟ್‌ಗನ್‌ 650 ಮೋಟರ್‌ಬೈಕ್‌ ಲಾಂಚ್‌ ಮಾಡಿದೆ. ಆದ್ರೆ ಸಧ್ಯ ಯುಕೆ ಹಾಗೂ ಯುರೋಪಿಯನ್‌ ಮಾರ್ಕೆಟ್‌ನಲ್ಲಿ ಈ ಗಾಡಿ ಲಾಂಚ್‌ ಆಗಿದೆ. ಆದ್ರೆ ಬುಕಿಂಗ್‌ ಮಾಡ್ಬೋದು. ಮಾರ್ಚ್‌ನಿಂದ ಟೆಸ್ಟ್‌ ರೈಡ್‌ಗೂ ಸಿಗಲಿದೆ. ಇದ್ರಲ್ಲಿ 648cc ಪ್ಯಾರಲಲ್‌ ಟ್ವಿನ್‌ ಇಂಜಿನ್‌ ಇದೆ. ಅಂದ್ರೆ ಒಂದೇ ಸಿಲಿಂಡರ್‌ನಿಂದ ಎರಡು ಎಕ್ಸಾಸ್ಟ್‌ ಅಥ್ವಾ ಸೈಲೆನ್ಸರ್‌ ಇರುತ್ತೆ. ಇಂಟರ್‌ಸೆಪ್ಟ್‌ ತರ… ಇದು ಏರ್‌ ಹಾಗೂ ಆಯಿಲ್‌ ಕೂಲ್ಡ್‌ ಇಂಜಿನ್…‌ 6 ಸ್ಪೀಡ್‌ ಗೇರ್‌ ಬಾಕ್ಸ್‌ನ ಈ ಇಂಜಿನ್‌ 46.4 ಹಾರ್ಸ್‌ ಪವರ್‌ ಹಾಗೂ 52.3 ನ್ಯೂಟನ್‌ ಮೀಟರ್‌ ಟಾರ್ಕ್‌ ಪ್ರೊಡ್ಯೂಸ್‌ ಮಾಡುತ್ತೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 22 ಕಿಲೋಮೀಟರ್‌ ಮೈಲೇಜ್‌ ನೀಡುತ್ತೆ ಅಂತ ಕಂಪನಿ ಕ್ಲೈಮ್‌ ಮಾಡಿದೆ. ಡುಯಲ್‌ ಚಾನಲ್‌ ABS ಇದೆ. ಮುಂದೆ 18, ಹಿಂದೆ 17 ಇಂಚಿನ ಅಲಾಯ್‌ ವೀಲ್‌ ಇದೆ. ನಾಲ್ಕು ಕಲರ್‌ ಆಪ್ಶನ್‌ನಲ್ಲಿ ಸಿಗುತ್ತೆ. ಸಧ್ಯಕ್ಕೆ ಸಿಂಗಲ್‌ ಸೀಟ್‌ ವರ್ಷನ್‌ ಸಿಗುತ್ತೆ ಅಂತ ಕಂಪನಿ ಹೇಳಿದೆ. ಇದ್ರ ಎಕ್ಸ್‌ ಷೋ ರೂಂ ಬೆಲೆ 3.6 ಲಕ್ಷ ಇರುತ್ತೆ ಅಂತ ಕಂಪನಿ ಹೇಳಿದೆ.

-masthmagaa.com

Contact Us for Advertisement

Leave a Reply