ರೋಜ್‌ಗಾರ್ ಮೇಳ: 50 ಸಾವಿರ ನಿರುದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ನೀಡಿದ ಮೋದಿ

masthmagaa.com:

ಸರ್ಕಾರಿ ಉದ್ಯೋಗಗಳಿಗೆ ಹೊಸದಾಗಿ ಸೇರಿದ 51 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ. ದೇಶಾದ್ಯಂತ 37 ಸ್ಥಳಗಳಲ್ಲಿ ನಡೆದ ಮೇಳದಲ್ಲಿ ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಹಲವು ಇಲಾಖೆ, ಸಚಿವಾಲಯಗಳಲ್ಲಿನ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ “ಇದುವರೆಗೆ ಲಕ್ಷಾಂತರ ಯುವಕರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಪತ್ರಗಳನ್ನು ಸ್ವೀಕರಿಸುವ 50 ಸಾವಿರ ಮಂದಿಯ ಕುಟುಂಬಗಳಿಗೆ ಇದು ದೀಪಾವಳಿಗಿಂತ ಕಡಿಮೆಯೇನಲ್ಲ. ಸರ್ಕಾರ ಯುವಜನರ ಭವಿಷ್ಯವನ್ನ ಗಮನದಲ್ಲಿಟ್ಕೊಂಡು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡ್ತಿದೆ. ನಾವು ನೇಮಕಾತಿ ಪ್ರಕ್ರಿಯೆಯನ್ನ ಸುವ್ಯವಸ್ಥಿತಗೊಳಿಸಿದ್ದೇವೆ. ಎಸ್​ಎಸ್​ಸಿ ಪರೀಕ್ಷೆಗಳನ್ನು ಈಗ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗ್ತಿದೆ. ಭಾಷೆಯ ಅಡೆತಡೆ ಎದುರಿಸಿದವರಿಗೆ ಇದು ಅವಕಾಶ ಕಲ್ಪಿಸಿದೆ” ಅಂದಿದ್ದಾರೆ.

-masthmagaa.com

Contact Us for Advertisement

Leave a Reply