ಭಾರತದ ರೂಪಾಯಿಯನ್ನ ಖರೀದಿ ಮಾಡಲಿದೆ ರಷ್ಯಾ!

masthmagaa.com:

ರಷ್ಯಾ, ತನ್ನ ನ್ಯಾಷನಲ್‌ ವೆಲ್ತ್‌ ಫಂಡ್‌ ಅಂದ್ರೆ ಕಷ್ಟಕಾಲದಲ್ಲಿ ಬಳಕೆಯಾಗೋಕೆಗೆ ಇಟ್ಕೊಂಡಿರೋ ಹಣವನ್ನ ಉಳಿಸಿಕೊಳ್ಳೊ ನಿಟ್ಟಿನಲ್ಲಿ ಮಿತ್ರ ರಾಷ್ಟ್ರಗಳಿಂದ ಕರೆನ್ಸಿ ಖರೀದಿ ಮಾಡೋಕೆ ಮುಂದಾಗಿದೆ. ಈ ಬಗ್ಗೆ ರಷ್ಯಾದ ಸೆಂಟ್ರಲ್‌ ಬ್ಯಾಂಕ್‌ ಹೇಳಿಕೆ ಪ್ರಕಟಿಸಿದ್ದು ಚೀನಾ, ಭಾರತ, ಹಾಗೂ ಟರ್ಕಿ ದೇಶಗಳಿಂದ ಹಣ ಖರೀದಿ ಮಾಡೋದಕ್ಕೆ ಮುಂದಾಗಿದ್ದೀವಿ ಅಂತ ಹೇಳಿದೆ. ಯುಕ್ರೇನ್‌ ಮೇಲಿನ ಆಕ್ರಮಣದ ಹಿನ್ನಲೆಯಲ್ಲಿ ಹೇರಲಾಗಿರೊ ನಿರ್ಬಂಧಗಳಿಂದ ರಷ್ಯಾಕ್ಕೆ ಡಾಲರ್‌ ಅಥ್ವಾ ಯುರೋ ಕರೆನ್ಸಿಯನ್ನ ಖರೀದಿ ಮಾಡಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಹಾಗಾಗಿ ಚೀನಾದ ಯುವಾನ್‌, ಭಾರತದ ರೂಪಾಯಿ, ಹಾಗೂ ಟರ್ಕಿಯ ಲಿರಾವನ್ನ ಬೈ ಮಾಡಲಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply