ರಷ್ಯಾವನ್ನ ʻಭಯೋತ್ಪಾದಕ ರಾಷ್ಟ್ರʼ ಅಂತ ಕರೆದ EU!

masthmagaa.com:

ಕಳೆದ 9 ತಿಂಗಳಿನಿಂದ ಯುಕ್ರೇನ್‌ ಮೇಲೆ ನಿರಂತರ ಆಕ್ರಮಣ ಮಾಡ್ತಿರೊ ರಷ್ಯಾವನ್ನ ʻಟೆರರ್‌ ಸ್ಟೇಟ್‌ʼ ಅಂದ್ರೆ ಭಯೋತ್ಪಾದಕ ರಾಷ್ಟ್ರ ಅಂತ ಯುರೋಪಿಯನ್‌ ಒಕ್ಕೂಟ ಘೋಷಿಸಿದೆ. ಹಾಗೂ ಇತ್ತೀಚಿನ ರಷ್ಯಾ ದಾಳಿಗಳನ್ನ ಕಟುವಾಗಿ ಖಂಡಿಸಿದೆ. ರಷ್ಯಾ ಮೂಲ ಸೌಕರ್ಯಗಳನ್ನ ಟಾರ್ಗೆಟ್‌ ಮಾಡಿ ದಾಳಿ ಮಾಡ್ತಿದ್ದು, ಯುಕ್ರೇನ್‌ನ ಪವರ್‌ ಗ್ರಿಡ್‌ಗಳು ಹಾನಿಗೊಳಗಾಗಿವೆ. ಇದ್ರಿಂದ ಲಕ್ಷಗಟ್ಟಲೇ ಜನ ಕತ್ತಲಲ್ಲಿ ಬದುಕೊ ಪರಿಸ್ಥಿತಿ ಉಂಟಾಗಿದೆ. ಇನ್ನು ರಷ್ಯಾ ಸೇನೆ ಕೆಲ ಸ್ಥಳಗಳನ್ನ ಗುರಿಯಾಗಿಸಿಕೊಂಡು 70 ಕ್ರೂಸ್‌ ಮಿಸೈಲ್‌ಗಳನ್ನ ಹಾರಿಸಿದ್ದು, ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ಕರೆಂಟ್‌ ಮತ್ತು ನೀರಿನ ಸಪ್ಲೈನಲ್ಲಿ ತೊಂದರೆ ಉಂಟಾಗಿದೆ. ಇದು ಮಾನವೀಯತೆಯ ವಿರುದ್ದದ ಅಪರಾಧ ಅಂತ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply