ರಷ್ಯಾದಲ್ಲಿ ಮತ್ತೆ ಅಧಿಕಾರದತ್ತ ವ್ಲಾದಿಮಿರ್ ಪುಟಿನ್!

masthmagaa.com:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬೆಂಬಲಿತ ಪಕ್ಷ ಯುನೈಟೆಡ್ ರಷ್ಯಾ ಡ್ಯೂಮಾ ಚುನಾವಣೆಯಲ್ಲಿ ಗೆದ್ದಿದೆ. 450 ಸ್ಥಾನಗಳ ಪೈಕಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವ್ಲಾದಿಮಿರ್ ಪುಟಿನ್ ನಮ್ಮ ಮೇಲೆ ನಂಬಿಕೆ ಇಟ್ಟು, ತಮ ಹಾಕಿದ ಜನರಿಗೆ ಧನ್ಯವಾದ ಅಂತ ಹೇಳಿದ್ದಾರೆ. ಆದ್ರೆ ವಿಪಕ್ಷಗಳು ಚುನಾವಣೆಯಲ್ಲಿ ದೊಡ್ಡ ಮಟ್ಟದ ಮೋಸ ನಡೆದಿದೆ ಅಂತ ಆರೋಪ ಮಾಡಿದೆ. 2011ರಲ್ಲಿ ಏನ್ ಮಾಡಿದ್ರೋ ಈಗಲೂ ಅದೇ ಮಾಡಿದ್ದಾರೆ ಅಂತ ಅಲೆಕ್ಸಿ ನಾವಲ್ನಿ ಬೆಂಬಲಿಗರು ಆರೋಪಿಸಿದ್ದಾರೆ. ಅಂದಹಾಗೆ 2011ರಲ್ಲೂ ಮೋಸದಲ್ಲಿ ಚುನಾವಣೆ ಗೆದ್ದಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು. ಆಗಲೂ ಅಲೆಕ್ಸಿ ನಾವಲ್ನಿ ನೇತೃತ್ವದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಸದ್ಯ ಅಲೆಕ್ಸಿ ನಾವಲ್ನಿ ಜೈಲಿನಲ್ಲಿದ್ದಾರೆ.

-masthmagaa.com

Contact Us for Advertisement

Leave a Reply