ಯುಕ್ರೇನ್‌ ವಿರುದ್ದ ರಷ್ಯಾ ಇರಾನ್‌ ಡ್ರೋನ್‌ ಬಳಕೆ! ವಿಶ್ವಸಂಸ್ಥೆಗೂ ಹೋದ ಚರ್ಚೆ!

masthmagaa.com:

ರಷ್ಯಾ-ಯುಕ್ರೇನ್‌ ನಡುವಿನ ಭೀಕರ ಸಂಘರ್ಷ ಸತತ ಎಂಟು ತಿಂಗಳನ್ನ ಪೂರೈಸಿ ಮುನ್ನಗ್ಗುತ್ತಿದೆ. ಹಲವು ತಿರುವುಗಳು, ಟ್ವಿಸ್ಟ್‌ಗಳು, ಸಾವಿರಾರು ಜನರ ಪ್ರಾಣಹಾನಿ, ಆಸ್ತಿ ಪಾಸ್ತಿ ಹಾನಿಗಳ ಜೊತೆಗೆ ಈ ಯುದ್ದ ಕಂಟಿನ್ಯೂ ಆಗಿದೆ. ಇದ್ರ ಮಧ್ಯೆದಲ್ಲಿಯೇ ಮೂರು ಸೇನೆಗಳ ಅಂದ್ರೆ, ನೆಲ, ಸಮುದ್ರ ಮತ್ತು ವಾಯುಪಡೆಗಳ ಜೊತೆಗೆ ಅಧ್ಯಕ್ಷ ಪುಟಿನ್ ಸಭೆ ಮಾಡಿ ಚರ್ಚೆ ಮಾಡಿದ್ದಾರೆ ಅಂತ ಕ್ರೆಮ್ಲಿನ್‌ ಹೇಳಿದೆ. ಇತ್ತ ಈ ಸಮಯದಲ್ಲೇ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ಪ್ರಾಯೋಗಿಕ ಉಡಾವಣೆಗಳನ್ನೂ ರಷ್ಯಾ ಮಾಡಿದೆ. ಇದೇ ಟೈಂನಲ್ಲೇ ರಷ್ಯಾ ನ್ಯೂಕ್ಲಿಯರ್‌ ಪಡೆಯನ್ನ ಕೂಡ ತರಬೇತಿ ಮಾಡ್ತಿದೆ ಅಂತ ವರದಿಯಾಗಿದೆ. ಇನ್ನು ರಷ್ಯಾ, ಯುಕ್ರೇನ್‌ ವಿಕಿರಣ ಸ್ಟೋಟಕಗಳ ಬಳಸ್ತಿದೆ ಅಂತ ಆರೋಪ ಮಾಡಿತ್ತು. ಇದ್ರ ಬೆನ್ನಲ್ಲೇ ಈಗ ರಷ್ಯಾ ಮೇಲೆ ಯುಕ್ರೇನ್‌ ಕೂಡ ಮತ್ತೊಂದು ಆರೋಪ ಮಾಡಿದ್ದು ಯುಕ್ರೇನ್‌ನ ನಾಗರಿಕರ ವಿರುದ್ಧ ರಷ್ಯಾ ಸುಮಾರು 400 ಇರಾನ್‌ ನಿರ್ಮಿತ ಡ್ರೋನ್‌ಗಳನ್ನು ಬಳಸಿದೆ ಅಂತ ಹೇಳಿದೆ. ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಈ ಆರೋಪ ಮಾಡಿದ್ದಾರೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ರಷ್ಯಾ ಇದನ್ನ ಸಾರಾಸಗಾಟಾಗಿ ನಿರಾಕರಿಸಿದೆ. ಇನ್ನು ಈ ರೀತಿಯ ಡ್ರೋನ್‌ಗಳ ಇರಾನ್‌ನಿಂದ ತಗೊಂಡು ಬಳಸಿರೋದನ್ನ ಪರಿಶೀಲಿಸೋಕೆ ವಿಶ್ವಸಂಸ್ಥೆ ತಜ್ಞರ ಆಯೋಗವನ್ನ ಯುಕ್ರೇನ್‌ಗೆ ಕಳುಹಿಸೋಕೆ ಮುಂದಾಗಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply