ಮಿತ್ರ ರಾಷ್ಟ್ರ ಬೆಲಾರೂಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸ್ತೀನಿ: ಪುಟಿನ್

masthmagaa.com:

ಯುಕ್ರೇನ್‌ ಯುದ್ದವನ್ನ ಆತಂಕದ ಕಣ್ಣುಗಳಿಂದ ನೋಡ್ತಿರೋ ಇಡೀ ಜಗತ್ತಿಗೆ ಮತ್ತೊಮ್ಮೆ ಪರಮಾಣು ಭೀತಿ ಎದುರಾಗಿದೆ. ಮೊದಲಿನಿಂದಲೂ ನ್ಯೂಕ್ಲಿಯರ್‌ ಅಸ್ತ್ರಗಳ ಬಳಕೆಯ ಬಗ್ಗೆ ಹಿಂಟ್‌ ಕೊಡ್ತಾ ಬಂದಿದ್ದ ಪುಟಿನ್‌, ಇದೀಗ ತನ್ನ ಮಿತ್ರ ದೇಶ ಬೆಲಾರೂಸ್‌ನಲ್ಲಿ ಪರಮಾಣು ಅಸ್ತ್ರಗಳನ್ನ ಇಳಿಸೋದಾಗಿ ಅನೌನ್ಸ್‌ ಮಾಡಿದ್ದಾರೆ. ಅಂದ್ರೆ ಬೆಲೂರೂಸ್‌ನಲ್ಲಿ ಪರಮಾಣು ಶಸ್ತ್ರಗಳನ್ನ ತಾನು ನಿಯೋಜನೆ ಮಾಡ್ತೀದ್ದೀನಿ ಅಂತ ಪುಟಿನ್‌ ಹೇಳಿದ್ದಾರೆ. ಜೊತೆಗೆ ಯುಕ್ರೇನ್‌ ಏನಾದ್ರೂ ಪಾಶ್ಚಿಮಾತ್ಯ ದೇಶಗಳಿಂದ ಅಪಾಯಕಾರಿಯಾದ ಶಸ್ತ್ರಗಳನ್ನ ಪಡೆದ್ರೆ, ಹೆಚ್ಚು ಸಾಮರ್ಥ್ಯ ಹೊಂದಿರೊ ಯುರೇನಿಯಂ ಶಸ್ತ್ರಾಸ್ತ್ರಗಳನ್ನ ಕೂಡ ನಾವು ನಿಯೋಜನೆ ಮಾಡ್ತೀವಿ ಅಂತ ಪುಟಿನ್‌ ಬೆದರಿಕೆ ನೀಡಿದ್ದಾರೆ. ಇದೇ ವೇಳೆ ʻಈ ಕ್ರಮ ಸಾಮಾನ್ಯವಾಗಿದೆ. ಅಮೆರಿಕ ದಶಕಗಳ ಹಿಂದಿನಿಂದಲೂ ಈ ರೀತಿ ಮಾಡ್ತಾ ಬಂದಿದೆ. ಯುದ್ದತಂತ್ರವಾಗಿ ಅವರ ಮಿತ್ರ ರಾಷ್ಟ್ರಗಳ ಭೂಭಾಗದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನ ಬಹಳ ಹಿಂದೆಯೇ ನಿಯೋಜನೆ ಮಾಡಿದೆʼ ಅಂತ ಪುಟಿನ್‌ ತಮ್ಮ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾರೆ. ಅಲ್ದೇ ಈ ಬಗ್ಗೆ ಬೆಲಾರೂಸ್‌ನ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಶೆಂಕೊ ಅವರ ಜೊತೆ ಮಾತಾಡಿದ್ದು, ನಮಗೆ ಅವರು ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ ಅಂತ ಪುಟಿನ್‌ ಹೇಳಿದ್ದಾರೆ. ಇತ್ತ ಪುಟಿನ್‌ ಬೆದರಿಕೆ ನೀಡಿದ್ದೆ ತಡ, International Campaign to Abolish Nuclear Weapons (ICAN) ಕಳವಳ ವ್ಯಕ್ತಪಡಿಸಿದೆ. ಯುಕ್ರೇನ್‌ ಯುದ್ದ ದೀರ್ಘವಾದಷ್ಟು ಪರಮಾಣು ದಾಳಿಯ ಸಾಧ್ಯತೆ ಹೆಚ್ಚಾಗುತ್ತೆ ಅಂತ ಎಚ್ಚರಿಕೆ ನೀಡಿದೆ. ಇನ್ನು ಇತ್ತೀಚೆಗೆ ಅಮೆರಿಕ ಹಾಗೂ ರಷ್ಯಾ ನಡುವೆ ಇದ್ದ ಪರಮಾಣು ನಿಯಂತ್ರಣ ಒಪ್ಪಂದದಿಂದ ಕೂಡ ರಷ್ಯಾ ಹೊರಬಂದಿತ್ತು. ಹೀಗಾಗಿ ರಷ್ಯಾವನ್ನ ಈವಾಗ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದ ಪರಮಾಣು ಬಳಕೆ ಮಾಡೋದ್ರಿಂದ ತಡೆಯೋಕೆ ಆಗಲ್ಲ ಅಂತ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇತ್ತೀಚೆಗೆ ರಷ್ಯಾ-ಯುಕ್ರೇನ್‌ ಯುದ್ದವನ್ನ ನಿಲ್ಲಿಸೋಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮಧ್ಯಸ್ಥಿಕೆ ವಹಿಸೋ ರೀತಿ ರಷ್ಯಾಕ್ಕೆ ಹೋಗಿ ಪುಟಿನ್‌ರನ್ನ ಭೇಟಿಯಾಗಿದ್ರು. ರಷ್ಯಾ ಕೂಡ ಯುದ್ದವನ್ನ ನಿಲ್ಲಿಸೊ ಬಗ್ಗೆ ಮಾತನಾಡಿದೆ, ಭೇಟಿ ಪಲಧಾಯಕವಾಗಿತ್ತು ಅಂತ ಚೀನಾ ಹೇಳಿಕೊಂಡಿತ್ತು. ಆದ್ರೆ ಈ ಭೇಟಿ ಬೆನ್ನಲ್ಲೇ ಪುಟಿನ್‌ ಈ ಪರಮಾಣು ಶಸ್ತ್ರಾಸ್ತ್ರವನ್ನ ಬೆಲಾರೂಸ್‌ ಗಡಿಯಲ್ಲಿ ನಿಯೋಜನೆ ಮಾಡೋದಾಗಿ ಅನೌನ್ಸ್‌ ಮಾಡಿದ್ದಾರೆ.

ಇನ್ನೊಂದ್‌ ಕಡೆ ಯುಕ್ರೇನ್‌ ಯುದ್ದದಲ್ಲಿ ರಷ್ಯಾಗೆ ಅಂದುಕೊಂಡಷ್ಟು ವೇಗದಲ್ಲಿ ಗೆಲುವು ಸಿಗ್ತಾಯಿಲ್ಲ. ಹೀಗಾಗಿ ಯುದ್ದವನ್ನ ತೀವ್ರಗೊಳಿಸೋಕೆ ರಷ್ಯಾ ಮುಂದಾಗಿದೆ. ಈ ನಿಟ್ಟಿನಲ್ಲಿ ತನ್ನ ಸೇನೆಗೆ ಮತ್ತೆ 4 ಲಕ್ಷ ಹೆಚ್ಚುವರಿ ಸೈನಿಕರನ್ನ ಸೇರಿಸಿಕೊಳ್ಳೊದಾಗಿ ಹೇಳಿದೆ. ಕಾಂಟ್ರ್ಯಾಕ್ಟ್‌ ಬೇಸ್‌ ಮೇಲೆ ಯೋಧರನ್ನ ಸೇನೆಗೆ ಸೇರಿಸಿಕೊಳ್ಳಲಾಗುವುದು ಅಂತ ಪುಟಿನ್‌ ಅರಮನೆ ಕ್ರೆಮ್ಲಿನ್‌ ಪ್ರಕಟ ಮಾಡಿದೆ. ಅಂದ್ಹಾಗೆ ಕಳೆದ ಬಾರಿ ಯುದ್ದದಲ್ಲಿ ಹಿನ್ನಡೆಯಾದಾಗ ರಷ್ಯಾ 3 ಲಕ್ಷ ಜನರ ಸೇನೆಯನ್ನ ಸಜ್ಜುಗೊಳಿಸಿತ್ತು. ಇದೀಗ ಮತ್ತೆ ಹೊಸದಾಗಿ 4 ಲಕ್ಷ ಯೋಧರನ್ನ ಸೇನೆಗೆ ಸೇರಿಸೋದಾಗಿ ಅನೌನ್ಸ್‌ ಮಾಡಿದೆ.

-masthmagaa.com

Contact Us for Advertisement

Leave a Reply