ಯುಕ್ರೇನ್‌-ರಷ್ಯಾ ಯುದ್ದಕ್ಕೆ ಆರು ತಿಂಗಳು ಭರ್ತಿ!

masthmagaa.com:

ಈ ದಶಕದ ಆರಂಭದಲ್ಲೇ ರಕ್ತಸಿಕ್ತ ಅಧ್ಯಾಯ ಬರೆದಿರೋ ಯುಕ್ರೇನ್‌ ಹಾಗೂ ರಷ್ಯಾಗಳ ನಡುವಿನ ಕಾದಾಟಕ್ಕೆ ಬರೋಬ್ಬರಿ 6 ತಿಂಗಳು ಭರ್ತಿಯಾಗಿದೆ. ಯುಕ್ರೇನ್‌ ಮೇಲೆ ಮುಗಿಬಿದ್ದಿರೋ ರಷ್ಯನ್‌ ಪಡೆಗಳು ಯುಕ್ರೇನಿನ ಪೂರ್ವ ಮತ್ತು ದಕ್ಷಿಣ ಭಾಗಗಳ ಬಹುತೇಕ ಪ್ರದೇಶಗಳ ಮೇಲೆ ಕಂಟ್ರೋಲ್‌ ಸಾಧಿಸುವಲ್ಲಿ ಯಶಸ್ವಿಯಾಗಿವೆ. ಇದರ ನಡುವೆಯೇ ನಿನ್ನೆ ಅದೇ ರಷ್ಯಾದಿಂದ ಸ್ವತಂತ್ರಗೊಂಡ ಯುಕ್ರೇನ್‌, 31 ನೇ ವರ್ಷದ ಸ್ವಾತಂತ್ರ ದಿನ ಆಚರಿಸಿದೆ. ಈ ವೇಳೆ ರಷ್ಯಾ ಮಾಡಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 22 ಮಂದಿ ನಾಗರಿಕರು ಸಾವೀಗೀಡಾಗಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಅಂತ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಆರೋಪ ಮಾಡಿದ್ದಾರೆ. ಇತ್ತ ರಷ್ಯಾ ಅಧ್ಯಕ್ಷ ಪುಟಿನ್‌ ಹಾಗೂ ಅವರ ಮಿಲಿಟರಿ ಅಧಿಕಾರಿಗಳನ್ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಒಳಪಡಿಸುವಂತೆ ಮಾಡೋದಕ್ಕೆ ಯುಕ್ರೇನ್‌ ಯೋಜನೆ ರೂಪಿಸ್ತಿದೆ ಅಂತ ಯುಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ. ಇನ್ನೊಂದ್‌ ಕಡೆ ಯುಕ್ರೇನ್‌ನ ಸ್ವಾಂತತ್ರ್ಯ ದಿನಾಚರಣೆಯ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಯುಕ್ರೇನ್‌ಗೆ 2.98 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 23 ಸಾವಿರ ಕೋಟಿ ರೂಪಾಯಿಯ ಸೇನಾ ನೆರವು ನೀಡೋದಾಗಿ ಘೋಷಣೆ ಮಾಡಿದ್ದಾರೆ. ಇದ್ರಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು, ಆರ್ಟಿಲರಿ ಸಿಸ್ಟಮ್‌ಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು ಮತ್ತು ರಡಾರ್‌ ಸಿಸ್ಟಮ್‌ಗಳು ಒಳಗೊಂಡಿವೆ ಅಂತ ಹೇಳಲಾಗಿದೆ. ಇತ್ತ ಯುಕೆ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್‌ ಕೂಡ ಯುಕ್ರೇನ್‌ ಸ್ವಾಂತತ್ರ ದಿನಾಚರಣೆಯಂದು, ಯುನೈಟೆಡ್‌ ಕಿಂಗ್‌ಡೆಮ್‌ನ ಜನರು ಯಾವಾಗ್ಲೂ ನಿಮ್ಮ ಜೊತೆ ಇರ್ತಾರೆ ಅಂತ ಹೇಳಿದ್ದಾರೆ.

-masthmagaa.com

 

 

Contact Us for Advertisement

Leave a Reply