ರಷ್ಯಾದಿಂದ ಭಾರತಕ್ಕೆ ಬರ್ತಿದ್ದ ತೈಲದ ಹಡಗುಗಳಿಗೆ ಅಮೆರಿಕ ಅಡ್ಡಗಾಲು!

masthmagaa.com:

G7 ರಾಷ್ಟ್ರಗಳು ನಿಗದಿ ಪಡಿಸಿದ್ದ ತೈಲ ಬೆಲೆ ಮಿತಿಯನ್ನ ಉಲ್ಲಂಘನೆ ಮಾಡಿದ್ದಕ್ಕೆ ರಷ್ಯಾದಿಂದ ಭಾರತಕ್ಕೆ ಬರಬೇಕಿದ್ದ 50 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಆಮದಿಗೆ ಅಡಚಣೆ ಉಂಟಾಗಿದೆ. ರಷ್ಯಾದಿಂದ ತೈಲ ತರಬೇಕಿದ್ದ ಟ್ಯಾಂಕರ್‌ ಹಡಗುಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದ್ರಿಂದಾಗಿ 50 ಲಕ್ಷ ಬ್ಯಾರೆಲ್‌ಗಳ ಸೊಕೋಲ್‌ ದರ್ಜೆಯ ಕಚ್ಚಾ ತೈಲ ಭಾರತ ತಲುಪೋಕೆ ಸಾಧ್ಯವಾಗಿಲ್ಲ ಅಂತ ತಿಳಿದು ಬಂದಿದೆ. ಲಂಡನ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಗ್ರೂಪ್‌ ಹಾಗೂ Kpler ಸಂಸ್ಥೆಗಳ ಹಡಗು ಟ್ರ್ಯಾಕಿಂಗ್‌ ಡೇಟಾ ಆಧರಿಸಿ ಅಮೆರಿಕ ಈ ನಿರ್ಬಂಧ ಹೇರಿದೆ. ಹಾಗಾಗಿ NS ಸೆಂಚುರಿ ಹಾಗೂ Sovcomflot ಟ್ಯಾಂಕರ್‌ಗಳು ತೈಲ ರಫ್ತು ಮಾಡೋಕಾಗ್ದೆ ಶ್ರೀಲಂಕಾದಲ್ಲಿ ಬೀಡು ಬಿಟ್ಟಿವೆ. ಅಂದ್ಹಾಗೆ ಭಾರತ ಪ್ರಪಂಚದ ಮೂರನೇ ಅತಿ ಡೊಡ್ಡ ತೈಲ ಆಮದುದಾರ ಹಾಗೂ ಬಳಕೆ ಮಾಡೋ ದೇಶವಾಗಿದೆ. ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿದ್ಮೇಲೆ ಭಾರತ ರಿಯಾಯಿತಿ ದರದಲ್ಲಿ ರಷ್ಯನ್‌ ತೈಲ ಖರೀದಿ ಮಾಡ್ತಿದೆ. ಆದ್ರೀಗ ರಷ್ಯನ್‌ ಟ್ಯಾಂಕರ್‌ಗಳ ಮೇಲೂ ನಿರ್ಬಂಧ ಇರೋದ್ರಿಂದ ಭಾರತ ಪರ್ಯಾಯವಾಗಿ ಬೇರೆ ಟ್ಯಾಂಕರ್‌ಗಳಿಂದ ತೈಲ ಆಮದು ಮಾಡ್ಬೇಕಾಗತ್ತೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply