ರಷ್ಯಾ ಬಿಟ್ಟು ಯುಕ್ರೇನ್‌ ಸೇರಿದ್ದ ಸೈನಿಕ ಸ್ಪೇನ್‌ನಲ್ಲಿ ಶವವಾಗಿ ಪತ್ತೆ!

masthmagaa.com:

ರಷ್ಯಾ ಯುಕ್ರೇನ್‌ ಯುದ್ದಕ್ಕೆ ಸಂಬಂಧಿಸಿದಂತೆ ವಿಚಿತ್ರವಾದ ಬೆಳವಣಿಗೆಯೊಂದು ನಡೆದಿದೆ. ಕಳೆದ ವರ್ಷ ರಷ್ಯನ್‌ ಸೈನಿಕನೊಬ್ಬ ಯುಕ್ರೇನ್‌ ಕಡೆಗೆ ಸೇರ್ಕೊಂಡಿದ್ದ. ಜೊತೆಗೆ ಈತ ಒಂದು ರಷ್ಯನ್‌ ಹೆಲಿಕಾಪ್ಟರನ್ನೂ ತಗೊಂಡು ಯುಕ್ರೇನ್‌ಗೆ ಹೋಗಿ ಸೆಟಲ್‌ ಆಗಿದ್ದ. ಈಗ ಈತನ ಶವಪತ್ತೆಯಾಗಿದೆ. ವಿಚಿತ್ರ ಅಂದ್ರೆ ಈತನ ಮೃತದೇಹ ಸಿಕ್ಕಿರೋದು ಸ್ಪೇನ್‌ನಲ್ಲಿ. ರಷ್ಯಾ ಹಾಗೂ ಯುಕ್ರೇನ್‌ನಿಂದ ಸಾಕಷ್ಟು ದೂರದಲ್ಲಿರೋ ಸ್ಪೇನ್‌ದ ಗ್ಯಾರೇಜ್‌ ಒಂದ್ರಲ್ಲಿ ಈತನ ಶವ ದೊರಕಿದೆ. ಇನ್ನು ಇವನು Mi-8 ಹೆಲಿಕಾಪ್ಟರನ್ನ ಯಕ್ರೇನ್‌ಗೆ ಕೊಟ್ಟು, ಹೆಸರು ಬದಲಾಯಿಸ್ಕೊಂಡು ಯುಕ್ರೇನ್‌ ಪಾಸ್‌ಪೋರ್ಟ್‌ ಜೊತೆ ಸ್ಪೇನ್‌ನಲ್ಲಿದ್ದ. ಈಗ ಅಲ್ಲಿನ ವಿಲ್ಲಾಜೊಯೋಸಾ ನಗರದಲ್ಲಿ ಅಂತ್ಯವಾಗಿದೆ. ಈತನನ್ನ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಅಂತ ಸ್ಪೇನ್‌ ಪೊಲೀಸರು ಹೇಳಿದ್ದು ತನಿಖೆ ಶುರು ಮಾಡಿದ್ದಾರೆ. ಅಲೆಕ್ಸಿ ನೆವಾಲ್ನಿ ಮೃತಪಟ್ಟ ಬೆನ್ನಲ್ಲೇ ಈತನ ಸಾವೂ ಈಗ ಮುನ್ನೆಲಗೆ ಬರ್ತಿದೆ. ಇನ್ನು ಅತ್ತ ಅಲೆಕ್ಸಿ ನೆವಾಲ್ನಿ ಪತ್ನಿ ಯುಲೀನ್‌ ನವಲ್ನಿಯಾ ರಷ್ಯಾ ಅಧ್ಯಕ್ಷ ಪುಟಿನ್‌ ನನ್ನ ಗಂಡನನ್ನ ಹತ್ಯೆ ಮಾಡಿಸಿದ್ದಾರೆ. ಅವರಿಗೆ ವಿಷ ಉಣಿಸಲಾಗಿದೆ. ವಿಷದ ಕುರುಹು ಸಿಗದೇ ಇರ್ಲಿ ಅಂತ ಅಧಿಕಾರಿಗಳು ಅವರ ಮೃತದೇಹವನ್ನ ಮುಚ್ಚಿಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply