ISSಗೆ ಹಾರಿದ ರಷ್ಯಾದ ಗಗನಯಾತ್ರಿಗಳು!

masthmagaa.com:

ರಷ್ಯಾದ ಇಬ್ಬರು ಮತ್ತು ಅಮೆರಿಕದ ಓರ್ವ ಗಗನಯಾತ್ರಿ ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಕಜಕಸ್ತಾನದ ಬೈಕೊನು‌ ಕಾಸ್ಮೊಡ್ರೋಮ್‌ನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಆರಂಭಿಸಿದ್ದಾರೆ. ನಾಸಾದ ಗಗನಯಾತ್ರಿ ಲೊರಲ್ ಒಹರಾ ಮತ್ತು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೊಸ್ಕೋಸ್ಮೋಸ್‌ನ ಗಗನಯಾತ್ರಿಗಳಾದ ಒಲೆಗ್ ಕೊನೊನೆಂಕೊ ಮತ್ತು ನಿಕೊಲಾಯ್ ಚಬ್ ಅವರನ್ನು ಹೊತ್ತ ಸೋಯುಜ್ MS-24 ಗಗನನೌಕೆಯನ್ನ ಲಾಂಚ್‌ ಮಾಡಲಾಗಿದೆ. ಒಹರಾ ಅವರು ಅರು ತಿಂಗಳು ಹಾಗೂ ಉಳಿದ ಇಬ್ಬರು ಗಗನಯಾತ್ರಿಗಳು ಒಂದು ವರ್ಷ ಕಾಲ ISSನಲ್ಲಿ ಉಳಿಯಲಿದ್ದಾರೆ. ಅಂದ್ಹಾಗೆ ಒಹರಾ ಮತ್ತು ಚಬ್ ಇದೇ ಮೊದಲ ಬಾರಿಗೆ ಗಗನಯಾತ್ರೆ ಕೈಗೊಂಡಿದ್ದು, ಕೊನೊನೆಂಕೊ ಈಗಾಗಲೇ ನಾಲ್ಕು ಬಾರಿ ISSಗೆ ತೆರಳಿರುವ ಅನುಭವ ಹೊಂದಿದ್ದಾರೆ.

-masthmagaa.com

Contact Us for Advertisement

Leave a Reply