ಎಷ್ಟು ಬೇಕಾದ್ರೂ ಇಂಧನ ಕೊಡ್ತಾರೆ ಪುಟಿನ್! ಭಾರತ ರಷ್ಯಾ ಕ್ರಾಂತಿ!

masthmagaa.com:

ಯುಕ್ರೇನ್‌ ಯುದ್ಧದಿಂದ ಭಾರತ ಮತ್ತು ರಷ್ಯಾದ ವ್ಯಾಪಾರ ಮೈತ್ರಿ ಇನ್ನಷ್ಟು ಗಟ್ಟಿಯಾಗ್ತಿದ್ದು, ಇದೀಗ ರಷ್ಯಾ ಭಾರತಕ್ಕೆ ಮತ್ತಷ್ಟು ಗ್ಯಾಸ್‌ ಪೂರೈಕೆ ಮಾಡೋ ಸಾಧ್ಯತೆ ಇದೆ. ಈಗ ರಷ್ಯಾದ ಅತಿದೊಡ್ಡ Liquefied Natural Gas (LNG) ಉತ್ಪಾದಕ ಕಂಪನಿ ನೋವಾಟೆಕ್‌ ಭಾರತದ GAIL (Gas Authority of India Ltd) ಜೊತೆಗೆ ಒಪ್ಪಂದ ಮಾಡಿಕೊಳ್ಳೋಕೆ ಮಾತುಕತೆ ನಡೆಸಿದೆ ಅಂತ ವರದಿಯಾಗಿದೆ. ಯುಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ನಂತ್ರ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧ ಹೇರಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ತನ್ನ ವ್ಯಾಪಾರಕ್ಕಾಗಿ ಭಾರತ ಸೇರಿದಂತೆ ಇತರ ದೇಶಗಳ ಮುಖಮಾಡಿದೆ. ಇದೀಗ ನೋವಾಟೆಕ್‌ನ ಚೇರ್ಮನ್‌ ಲೆನಾಯ್ಡ್‌ ಮಿಖೆಲ್ಸಾನ್‌ ಮುಂದಿನ ವಾರ ಭಾರತಕ್ಕೆ ಭೇಟಿ ನೀಡ್ತಿದ್ದು ಈ ವೇಳೆ ಒಪ್ಪಂದಕ್ಕೆ ಸಹಿ ಬೀಳ್ಬಹುದು ಎನ್ನಲಾಗಿದೆ. GAIL ಭಾರತದ ಅತಿದೊಡ್ಡ ಗ್ಯಾಸ್‌ ಡಿಸ್ಟ್ರಿಬ್ಯೂಟರ್‌ ಆಗಿದ್ದು ಈ ಹಿಂದೆ GMTS ಅನ್ನೋ ಸಿಂಗಪೂರ್‌ ಕಂಪನಿಯೊಂದಿಗೆ LNG ಪೂರೈಕೆಗೆ ಒಪ್ಪಂದ ಮಾಡ್ಕೊಂಡಿತ್ತು. ಈ GMTS ರಷ್ಯಾದ ಗ್ಯಾಜ್‌ಪ್ರಾಮ್‌ನ ಯೂನಿಟ್‌ ಆಗಿತ್ತು. ಆದ್ರೆ ಯುಕ್ರೇನ್‌ ಯುದ್ಧದಿಂದ ಸಪ್ಲೈ ಚೇನ್‌ನಲ್ಲಿ ವ್ಯತ್ಯಾಸ ಆಗಿ GAILಗೆ ಕಳೆದ ತ್ರೈಮಾಸಿಕದಲ್ಲಿ 92% ನಷ್ಟ ಆಗಿತ್ತು. ಹೀಗಾಗಿ ಈಗ ನೇರವಾಗಿ ರಷ್ಯಾದ ನೊವಾಟೆಕ್‌ನೊಂದಿಗೆ ಒಪ್ಪಂದ ಮಾಡ್ಕೋತಿದೆ.
ಇಲ್ಲಿ ಮತ್ತೊಂದು ವಿಚಾರವನ್ನೂ ಕೂಡ ನಾವು ಗಮನಿಸಬೇಕು. ರಷ್ಯಾದ ಮೇಲೆ ನಿರ್ಬಂಧ ಹೇರಿರೋದ್ರಿಂದ ಅಮೆರಿಕ ಹಾಗೂ ಅದ್ರಲ್ಲೂ ಮುಖ್ಯವಾಗಿ ಯುರೋಪ್‌ ದೇಶಗಳಿಗೆ ತೈಲ ಹಾಗೂ ನ್ಯಾಚುರಲ್‌ ಗ್ಯಾಸ್‌ ಕೊರತೆ ಉಂಟಾಗಿದೆ. ಮುಂದೆಯೂ ಸಹ ನ್ಯಾಚುರಲ್‌ ಗ್ಯಾಸ್‌ ಸಮಸ್ಯೆ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗೋ ಸಾಧ್ಯತೆಯನ್ನ ತಜ್ಞರು ಲೆಕ್ಕಹಾಕಿದ್ದಾರೆ. ಹೀಗಾಗಿ ಈಗಾಗಲೇ ಕಡಿಮೆ ಬೆಲೆಗೆ ತೈಲವನ್ನ ತರಿಸಿಕೊಂಡು ಅದನ್ನ ರಿಫೈನ್‌ ಮಾಡಿ ಅಮೆರಿಕದಂತಹ ದೇಶಗಳಿಗೆ ಭಾರತದ ಕಂಪನಿಗಳು ಮಾರಾಟ ಮಾಡಿ ದೊಡ್ಡ ಲಾಭ ಗಳಿಸ್ತಾ ಇವೆ. ಈಗ ನ್ಯಾಚುರಲ್‌ ಗ್ಯಾಸ್‌ ಒಪ್ಪಂದ ಕೂಡ ಫೈನಲ್‌ ಆದ್ರೆ ಅಮೆರಿಕ ಹಾಗೂ ಮಿತ್ರರು ನ್ಯಾಚುರಲ್‌ ಗ್ಯಾಸ್‌ಗೋಸ್ಕರ ಭಾರತದ ಹಿಂದೆ ಬೀಳಬೋದು ಅಂತ ಕೂಡ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply