ಜಮ್ಮು: ಪುನರ್ವಸತಿಗಾಗಿ ಕಾಶ್ಮೀರಿ ಪಂಡಿತರ ಪ್ರತಿಭಟನೆ

masthmagaa.com:

ಪುನರ್ವಸತಿ ವಿಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಸರ್ಕಾರದ ವಿರುದ್ಧ ಕಾಶ್ಮೀರಿ ಪಂಡಿತರು ಜಮ್ಮುವಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. 1989ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕವಾದಿಗಳು ಈ ಸಮುದಾಯದವ್ರನ್ನ ಗುರಿಯಾಗಿಸಿ ಮಾಡಿದ ಹತ್ಯೆಯ ನಂತ್ರ ಪಂಡಿತರು ಜಮ್ಮುವಿಗೆ ವಲಸೆ ಬಂದಿದ್ರು. ನಂತ್ರ ಪಂಡಿತರ ಪುನರ್ವಸತಿಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಅಂತ ಸರ್ಕಾರ ಹೇಳ್ತಿದೆ. ಆದ್ರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಆರೋಪಿಸಿ ಪಂಡಿತರು ಪ್ರತಿಭಟನೆ ಮಾಡಿದ್ದಾರೆ. ಇತ್ತ ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿ ಸುಧಾರಣೆ ಆಗೋವರೆಗು ಕಾಶ್ಮೀರಿ ಪಂಡಿತರನ್ನ ಜಮ್ಮುಗೆ ಕಳಿಸ್ಬೇಕು. ಕಾಶ್ಮೀರಿ ಪಂಡಿತರ ಸುರಕ್ಷತೆ ಮುಖ್ಯ ಅಂತ ಜಮ್ಮು-ಕಾಶ್ಮೀರ ಮಾಜಿ ಸಿಎಂ ಗುಲಾಂ ನಬಿ ಅಝಾದ್‌ ಹೇಳಿದ್ದಾರೆ. ಇತ್ತೀಚೆಗೆ ಉಗ್ರ ಸಂಘಟನೆಗಳು ಕಾಶ್ಮೀರಿ ಪಂಡಿತ್‌ ಸಮುದಾಯಕ್ಕೆ ಸೇರಿದ ಉದ್ಯೋಗಿಗಳ ಹೆಸರಿನ ಹಿಟ್‌ಲಿಸ್ಟ್‌ ಬಿಡುಗಡೆ ಮಾಡಿದ್ರು. ಈ ಕಾರಣಕ್ಕಾಗಿ ಉದ್ಯೋಗಿಗಳು ಕೆಲಸಕ್ಕೆ ಹೋಗದೆ ತಮಗೆ ರಕ್ಷಣೆ ನೀಡ್ಬೇಕು ಅಂತ ಆಗ್ರಹಿಸಿ ಪ್ರತಿಭಟನೆ ಮಾಡಿದ್ರು.

-masthmagaa.com

Contact Us for Advertisement

Leave a Reply