“ಸಲಗ” ಸಿನಿಮಾ ಹೇಗಿದೆ ಗೊತ್ತಾ!?

masthmagaa.com:

ಅಂಡರ್ ವರ್ಲ್ಡ್ ಬ್ಯಾಕ್ ಡ್ರಾಪ್, ಸೇಡು, ಒಬ್ಬ, ನಟೋರಿಯಸ್ ರೌಡಿ, ಈ ರೌಡಿ ಗೆ ಯಾರ ಭಯನೂ ಇಲ್ಲ, ಯಾರನ್ನ ಕೊಲ್ಲೋಕು ಈತ ಹೆದರಲ್ಲ. ಸಾಮಾನ್ಯ ಮನುಷ್ಯನಂತೆ ಬದುಕುತ್ತಾ ಇದ್ದ ಈತ ರೌಡಿ ಆಗೋಕೆ ಕಾರಣವಾದ ಆ ಒಂದು ಫ್ಲ್ಯಾಷ್ಬ್ಯಾಕ್. ಈ ರೌಡಿ ನ ಹೊಡೆಯೋಕೆ ಕಾಯ್ತಾ ಇರುವ ಬೇರೆ ಪುಡಿ ರೌಡಿಗಳು, ಈ ಪುಡಿ ರೌಡಿಗಳ ವಿಚಿತ್ರ ವರ್ತನೆಗಳು. ಈ ನೊಟೋರಿಯಸ್ ರೌಡಿ ನ ಮಟ್ಟ ಹಾಕೋಕೆ ಎಂಟ್ರಿ ಕೊಡೋ ಖಡಕ್ ಪೊಲೀಸ್ ಅಧಿಕಾರಿ. ಇದೇ ಜೋನರ್ ನ ಸಿನಿಮಾಗಳನ್ನ ನಾವು ನೀವು ಸಾಕಷ್ಟು ನೋಡಿರ್ತೀವಿ, ಕೇಳಿರುತ್ತೇವೆ.. ಇಂಥ ಎಳೆ ಇಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿದ್ದರೂ ಕೂಡ ಅದ್ದೂರಿ ಮೇಕಿಂಗ್​ನಿಂದಾಗಿ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾ​ ಗಮನ ಸೆಳೆಯುತ್ತೆ.
ವಿಜಯ್​ ಅಲಿಯಾಸ್​ ಸಲಗ ಒಬ್ಬ ನಟೋರಿಸ್​ ರೌಡಿ.  ಅಷ್ಟಕ್ಕೂ ಯಾಕೆ ಅಂಥ ರೌಡಿ ಆದ? ಊರ ತುಂಬೆಲ್ಲ ಅವನಿಗೆ ದುಶ್ಮನ್​ಗಳು ಯಾಕೆ ಇದ್ದಾರೆ? ಅವರನ್ನೆಲ್ಲ ಈತ ಹೇಗೆ ಮಟ್ಟ ಹಾಕುತ್ತಾನೆ? ಸಲಗನ ಎದೆಯೊಳಗೆ ಹೊತ್ತಿಕೊಂಡಿರುವ ಸೇಡಿನ ಬೆಂಕಿಗೆ ಕಾರಣ ಏನು? ಇದನ್ನೆಲ್ಲ ತಿಳಿಯಲು ನೀವು ಪೂರ್ತಿ ಚಿತ್ರ ನೋಡಬೇಕು.ಮೊದಲೇ ಹೇಳಿದ ಹಾಗೆ ಈ ರೀತಿ ಕಥೆಯ ಎಳೆ ಇರುವ ಚಿತ್ರಗಳು ತುಂಬಾ ಬಂದಿವೆ, ಆದ್ರೆ ಸಲಗದ ಟ್ರೀಟ್ಮೆಂಟ್ ವಿಭಿನ್ನವಾಗಿದೆ, ರಿಚ್ ಆಗಿದೆ. ಸಾವಿತ್ರಿ, ಶೆಟ್ಟಿ, ಕೆಂಡ ಈ ಹೆಸರುಗಳು ಎಷ್ಟು ವಿಚಿತ್ರವಾಗಿದೆಯೋ ಅಷ್ಟೇ ವಿಚಿತ್ರವಾಗಿ, ಎಂಟರ್ತೈನಿಂಗ್ ಆಗಿ ಈ ಪಾತ್ರಗಳು ತೆರೆ ಮೇಲೆ ಕಾಣಿಸಿಕೊಳ್ಳುತ್ತದೆ. ಚಿತ್ರಕಥೆ ಬಿಗಿಯಾಗಿದೆ, ಆದ್ರೆ ಕೆಲವು ಫ್ಲಾಶ್ ಬ್ಯಾಕ್ ದೃಶ್ಯಗಳು ಒಂದು ರೀತಿ ಮೆಲೋಡ್ರಾಮಾ ಥರ ಅನ್ಸತ್ತೆ, ಆದ್ರೂ ಚಿತ್ರದ ಓಟಕ್ಕೆ ಅಡ್ಡಿ ಏನಲ್ಲ. ಆಮೇಲೆ ಚಿತ್ರದ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಹೌದು, ಮೈನಸ್ ಹೌದು. ತುಂಬಾ ರಾ ಫೀಲ್ ಇರುವ ರಿಯಲಿಸ್ಟಿಕ್ ಸಿನಿಮಾ ಲವರ್ಸ್ ನೀವಾಗಿದ್ದರೆ, ಹಂಗೆ ಪ್ರತಿನಿತ್ಯ ಈ ರೀತಿಯ ಬೀಪ್ ಸಂಭಾಶನೆಗಳು ನಮಗೆಲ್ಲ ಕೇಳಿ ಕೇಳಿ ಅಭ್ಯಾಸ ಆಗಿದೆ ಅನ್ನೋರು ನೀವಾಗಿದ್ರೆ ಈ ಸಿನಿಮಾದ ಡೈಲಾಗ್ಸ್ ನಿಮಗೆ ಇಷ್ಟ ಆಗತ್ತೆ. ಹಾಗಂತ ಬರೀ ಬೀಪ್ ಡೈಲಾಗ್ಸ್ ಗಳೇ ಇದರಲ್ಲಿ ಇದೆ ಅಂತಲ್ಲ. ಚಿತ್ರದ ಕಥೆ ಮತ್ತೆ ಪಾತ್ರಗಳಿಗೆ ತಕ್ಕಂತೆ ಇದೆ. ಹಾಗಾಗಿ ಚಿತ್ರದಲ್ಲಿನ ಸಂಭಾಷಣೆ ಈ ಸಿನಿಮಾದ ಬಿಗ್ಗೆಸ್ಟ್ ಹೈಲೈಟ್. ಸಂಭಾಶನೆ ಜೊತೆಗೆ ಚಿತ್ರಕಥೆಯನ್ನು ಕೂಡ  ವಿಜಯ್ ಜೊತೆಗೆ ಹಂಚಿಕೊಂಡು ಬರೆದಿರುವ ಮಾಸ್ತಿ ಅವರಿಗೆ ಫುಲ್ ಮಾರ್ಕ್ಸ್.

ಚಿತ್ರಕ್ಕೆ ಸೆನ್ಸಾರ್ ಮಂಡಳಿ A ಸರ್ಟಿಫಿಕೆಟ್ ಕೊಟ್ಟಿರೋದಕ್ಕೊ ಏನೋ ಚಿತ್ರದಲ್ಲಿ ಯಾವುದೇ ಬೀಪ್ ಸಂಭಾಷಣೆಗಳಿಗೆ ಬೀಪ್ ಇಲ್ಲ ಹಾಗೆ ರಕ್ತ ಪಾತ ಕೂಡ ಧಾರಾಳವಾಗಿ ಇದೆ. ಆದ್ರೆ ಹರಿಸಿದ ರಕ್ತದ ಪ್ರತಿ ಹನಿಯ ಹಿಂದೆ ಒಂದು ಅಥೆಂಟಿಕ್ ರೀಸನಿಂಗ್ ಇದೆ, ಪಕ್ವತೆ ಇದೆ. ಆದ್ರೆ ಚಿತ್ರದ ಕಥೆ ಊಹಿಸಲು ಅಸಾಧ್ಯ ಅನ್ನುವ ಥರ ಇಲ್ಲ.
ಇನ್ನು ತಮ್ಮ ಪಾತ್ರಕ್ಕೆ ಅಷ್ಟೇ ಅಲ್ಲದೇ ಪಾತ್ರಕ್ಕೂ ಗಟ್ಟಿತನ ದೊರಕಿಸಿಕೊಟ್ಟರು ದುನಿಯಾ ವಿಜಯ್ ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ ಅಂತ ಹೇಳಬಹುದು. ಕಮ್ ಬ್ಯಾಕ್ ಅಂತಾನೂ ಹೇಳಬಹುದು.
ಚಿತ್ರದ ನಾಯಕಿ ಸಂಜನಾ, ದುನಿಯಾ ವಿಜಯ್ ಸ್ನೇಹಿತನ ಪಾತ್ರ ಮಾಡಿರುವ ಪಾತ್ರದಾರಿ, ಸಾವಿತ್ರಿ, ಶೆಟ್ಟಿ ಹಾಗೂ ಕೆಂಡ ಪಾತ್ರಗಳು ಅಕ್ಷರಶಃ ಮಿಂಚಿವೆ. ಸಾಮ್ರಾಟ್ ಧನಂಜಯ್ ಪಾತ್ರ ಪೋಷಣೆ ಕಥೆಯ ಅವಶ್ಯಕತೆ ತಕ್ಕಂತೆ ಅದ್ದೂರಿಯಾಗಿದೆ. ಒಂದು ಮಾಸ್ ಚಿತ್ರಕ್ಕೆ ಹೇಳಿ ಮಾಡಿಸಿದಂಥ ಹಿನ್ನೆಲೆ ಸಂಗೀತ ನೀಡಿರುವ ಚರಣ್ ರಾಜ್ ಅವರ ಕೆಲಸ ಅಚ್ಚುಕಟ್ಟು. ಶಿವ ಸೇನಾ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಚಿತ್ರದ ತಾಂತ್ರಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಪ್ರತೀ ರೌಡಿ ಅಥವಾ ಸಮಾಜ ಘಾತುಕ ಶಕ್ತಿಯ ಹುಟ್ಟಿಗೆ ಸಮಾಜವೇ ಕಾರಣ ಅನ್ನೋದು ರೌಡಿಸಂ ಚಿತ್ರಗಳ ಬಾಟಮ್ ಲೈನ್. ಈ ಅಂಶವನ್ನು ಸಲಗ ಚಿತ್ರ ಹೊಸತಾಗಿ ನಿರೂಪಿಸುವಲ್ಲಿ ಗೆದ್ದಿದೆ.
-masthmagaa.com
https://youtu.be/t08M0oL3HMQ
Contact Us for Advertisement

Leave a Reply