“ಸಮಂತಾ ಕೂಲ್‌, ನಾಗಚೈತನ್ಯ ಪೀಸ್‌ಫುಲ್‌ ” : ನಟಿ ಸೋಭಿತಾ ಧೂಲಿಪಾಲ್‌!

masthmagaa.com:

ಇತ್ತೀಚಿಗೆ ನಟಿ ಸೋಭಿತಾ ಮತ್ತು ನಾಗಚೈತನ್ಯ ಅವರ ಮಧ್ಯೆ ಲವ್‌ ಅಫೇರ್‌ ಇದೆ ಅನ್ನೋ ಮಾತು, ಮತ್ತು ಕೆಲವು ಫೋಟೋಗಳು ಸಹ ವೈರಲ್‌ ಆಗ್ತಾ ಇತ್ತು. ಆದರೆ ಈಗ ಸೋಭಿತಾ ನಾಗಚೈತನ್ಯ ಮತ್ತು ಸಮಂತಾ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಸೋಭಿತಾಗೆ ಒಂದಿಷ್ಟು ನಟರ ಹೆಸರನ್ನ ಹೇಳಿ ಇವರ ಬಗ್ಗೆ ನಿಮಗೆ ಏನ್‌ ಅನ್ಸತ್ತೆ ಹೇಳಿ ಅಂತ ಪ್ರಶ್ನೆ ಕೇಳಲಾಗಿತ್ತು. ಈ ಲಿಸ್ಟ್‌ನಲ್ಲಿ ನಾಗಚೈತನ್ಯ ಮತ್ತು ಸಮಂತಾ ಅವರ ಹೆಸರನ್ನೂ ಕೂಡ ಕೇಳಲಾಗಿತ್ತು. “ಸಮಂತಾ ತುಂಬಾನೇ ಕೂಲ್‌ ಅಂತ ಅನಿಸತ್ತೆ, ಅವರ ಫಿಲ್ಮ್‌ ಜರ್ನಿ ಮತ್ತು ಮೂವಿಗೆ ನೀಡುವ ಹೆಸರನ್ನ ನೋಡಿದ್ರೆ ಸಮಂತಾ ತುಂಬಾ ಕೂಲ್‌ ಅಂತ ಅನಿಸತ್ತೆ” ಅಂತ ಹೇಳಿದ್ದಾರೆ. ಹಾಗೇ ನಾಗಚೈತನ್ಯ ಬಗ್ಗೆ ಕೇಳಿದಕ್ಕೆ “ನಾಗಚೈತನ್ಯ ಅವರದ್ದು ಕೂಲ್‌ ಹೆಡ್‌, ತುಂಬಾನೇ ಶಾಂತ ವ್ಯಕ್ತಿತ್ವ. ತುಂಬಾನೇ ಡಿಗ್ನಿಟಿ ಇರುವಂತ ವ್ಯಕ್ತಿ. ನಿಜವಾಗ್ಲೂ ನಾನು ಅವರನ್ನ ಪ್ರಶಂಸಿಸುತ್ತೇನೆ” ಅಂತ ಹೇಳಿದ್ದಾರೆ.

ಕೊನೆಯಲ್ಲಿ ಡೇಟಿಂಗ್‌ ವಿಚಾರದ ಬಗ್ಗೆ ವದಂತಿ ಹಬ್ಬುತ್ತಾ ಇರೋ ಬಗ್ಗೆ “ಬುದ್ದಿ ಇಲ್ದೇ ಒಂದಿಷ್ಟು ಮಾತಾಡ್ತಾ ಇರ್ತಾರೆ. ಅದರ ಬಗ್ಗೆ ಎಲ್ಲಾ ನಾನು ಕ್ಲಾರಿಟಿ ಕೊಡೋಕೆ ಆಗೋದಿಲ್ಲ. ನಾನು ಏನು ತಪ್ಪನ್ನ ಮಾಡಿಲ್ಲ ಅಂತ ಅಂದಾಗ ಅವರೆಲ್ಲಾ ಮಾತಾಡಿದ್ರೆ ನಾನು ರಿಯಾಕ್ಟ್‌ ಮಾಡಬೇಕು ಅಂತೆನಿಲ್ಲ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply