ಹಜ್‌ ಯಾತ್ರೆಯಲ್ಲಿ ಭಾರತೀಯರ ರೆಕಾರ್ಡ್:‌ ಸೌದಿ ಹೇಳಿದ್ದೇನು?

masthmagaa.com:

2023ರಲ್ಲಿ 18 ಲಕ್ಷ ಭಾರತೀಯ ಮುಸ್ಲಿಂರು ಮೆಕ್ಕಾಗೆ ಭೇಟಿ ನೀಡಿ ಉಮ್ರಾಹ್‌ ಪ್ರಾರ್ಥನೆ ಮಾಡಿದ್ದಾರೆ ಅಂತ ಸೌದಿ ಅರೇಬಿಯಾ ಹೇಳಿದೆ. ವಿಶೇಷ ಏನಪ್ಪ ಅಂದ್ರೆ ಈ ರೀತಿ ಹಜ್‌ ಯಾತ್ರೆ ಕೈಗೊಂಡೋರ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಈ ಮಾಹಿತಿಯನ್ನ ಸೌದಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಯಾವ ದೇಶಗಳಿವೆ ಅಂತ ತಿಳಿದಿಲ್ಲ. ಅಂದ್ಹಾಗೆ ಹಜ್‌ ಯಾತ್ರೆಯಲ್ಲಿ ಭಾರತದ ಮಹತ್ವವನ್ನ ರೆಕಗ್ನೈಸ್‌ ಮಾಡಿ ಸೌದಿ ಅರೆಬಿಯಾದ ಹಜ್‌ ಹಾಗೂ ಉಮ್ರಾಹ್‌ ಸಚಿವ ಡಾಕ್ಟರ್‌ ತೌಫಿಕ್‌ ಬಿನ್‌ ಫವ್ಜಾನ್‌ ಅಲ್-ರಬಿಯಾ ಭಾರತಕ್ಕೆ ಬಂದಿದ್ರು. ಡಿಸೆಂಬರ್‌ ಮೊದಲ ವಾರದಲ್ಲಿ ಅವ್ರು ಭಾರತಕ್ಕೆ ವಿಸಿಟ್‌ ಕೊಟ್ಟಿದ್ರು. ಇದೀಗ ಈ ಅಂಕಿ ಅಂಶಗಳನ್ನ ಸೌದಿ ರಿಲೀಸ್‌ ಮಾಡಿದೆ.

-masthmagaa.com

Contact Us for Advertisement

Leave a Reply