10 ಲಕ್ಷ ಜನರಿಗೆ ಹಜ್​ ಕೈಗೊಳ್ಳಲು ಅವಕಾಶ: ಸೌದಿ ಘೋಷಣೆ

masthmagaa.com:

ಈ ವರ್ಷ ಹಜ್​​ ಕೈಗೊಳ್ಳಲು 10 ಲಕ್ಷ ಜನರಿಗೆ ಅವಕಾಶ ಕೊಡೋದಾಗಿ ಸೌದಿ ಅರೇಬಿಯಾ ಘೋಷಿಸಿದೆ. ಕೊರೋನಾ ಹಾವಳಿಯಿಂದಾಗಿ ಕಳೆದ ಎರಡು ವರ್ಷದಲ್ಲಿ ಕೆಲವೇ ಸಾವಿರದಷ್ಟು ಜನರಿಗೆ ಹಜ್​ ಕೈಗೊಳ್ಳಲು ಅವಕಾಶ ನೀಡಲಾಗಿತ್ತು. ಇದೀಗ ಕೊರೋನಾ ನಿರ್ಬಂಧಗಳನ್ನ ಸಡಿಲ ಮಾಡಿ 10 ಲಕ್ಷ ಜನರಿಗೆ ಅವಕಾಶ ನೀಡೋದಾಗಿ ಹೇಳಿದೆ. ಆದ್ರೆ ಸಂಪೂರ್ಣವಾಗಿ ಕೊರೋನಾ ಲಸಿಕೆ ಹಾಕ್ಕೊಂಡೋರು ಮತ್ತು 65 ವರ್ಷ ಒಳಗಿನವರಿಗೆ ಮಾತ್ರ ಅವಕಾಶ. ವಿದೇಶದಿಂದ ಬರೋರಿಗೆ ನೆಗಿಟಿವ್​ ಪಿಸಿಆರ್​ ರಿಪೋರ್ಟ್​ ಕಡ್ಡಾಯ. ಅಂದ್ಹಾಗೆ ಕೊರೋನಾ ಬರೋಕು ಮುಂಚೆ ಪ್ರತಿವರ್ಷ 25 ಲಕ್ಷ ಜನ ಹಜ್​ಗಾಗಿ ಸೌದಿಗೆ ಬರ್ತಿದ್ರು.

-masthmagaa.com

Contact Us for Advertisement

Leave a Reply