ಹೊಸ ಭಾಷ್ಯ ಬರೆಯಲಿದೆ ಈ ಖಟ್ಟರ್‌ ಮುಸ್ಲಿಂ ದೇಶ! ಅಂತರಿಕ್ಷಕ್ಕೆ ಹಾರಲಿದ್ದಾರೆ ಮೊದಲ ಮುಸ್ಲಿಂ ಮಹಿಳೆ!

masthmagaa.com:

ಖಟ್ಟರ್‌ ಮುಸ್ಲಿಂ ದೇಶ ಅಂತ ಕರೆಸಿಕೊಳ್ತಲೇ ಇಸ್ಲಾಮಿಕ್‌ ದೇಶಗಳ ಸಾಮ್ರಾಟನಾಗಿ ಮೆರೆಯುತ್ತಿರುವ ಸೌದಿ ಅರೇಬಿಯಾ ಆಧುನಿಕತೆಗೆ ಹೊರಳ್ತಾ ಇರೋದು ನಿಮಗೆಲ್ಲಾ ಗೊತ್ತಿರೋ ವಿಚಾರ. ಅದ್ರಲ್ಲೂ ಮಹಿಳೆಯರಿಗೆ ಹಕ್ಕುಗಳನ್ನ ಕೊಡುವ ವಿಚಾರದಲ್ಲಿ, ಮಹಿಳೆಯರನ್ನ ಸಾರ್ವಜನಿಕ ಜೀವನದಲ್ಲಿ ಭಾಗವಹಿಸುವಂತೆ ಮಾಡುವ ವಿಚಾರದಲ್ಲಿ ರಾಜಫ್ರಭುತ್ವ ಇರುವ ಸೌದಿ ಇತರೆ ಯಾವುದೇ ಪ್ರಜಾಪ್ರಭುತ್ವ ಇರುವ ಮುಸ್ಲಿಂ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದರ ಭಾಗವಾಗಿ ಈಗ ಮಹಿಳೆಯರನ್ನ ಬಾಹ್ಯಕಾಶಕ್ಕೂ ಕಳುಹಿಸಿಕೊಡುವ ಮೂಲಕ ಯಾವುದೇ ಪಾಶ್ಚಿಮಾತ್ಯ ದೇಶಕ್ಕೂ ಕಡಿಮೆ ಇಲ್ಲ ಅನ್ನೋ ಹಾಗೇ ಸೌದಿ ಹೊಸ ಇತಿಹಾಸಕ್ಕೆ ಬರೆಯಲಿದೆ. ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪುರುಷ ಗಗನ ಯಾತ್ರಿ ಜೊತೆಗೆ, ರಯ್ಯಾನ ಬರ್ಯಾನಿ ಅನ್ನೋ ಮಹಿಳಾ ಗಗನಯಾತ್ರಿಯನ್ನೂ ಅಂತರಿಕ್ಷಕ್ಕೆ ಕಳುಹಿಸಲಾಗುತ್ತೆ ಅಂತ ಸೌದಿಯ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಇಬ್ರೂ ಗಗನಯಾತ್ರಿಗಳೂ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಅಂತರಿಕ್ಷಕ್ಕೆ ಹಾರಲಿದ್ದಾರೆ ಅಂತ ತಿಳಿಸಲಾಗಿದೆ. ಈ ಹಿಂದೆ ಪಕ್ಕದ ಯುಎಇ ಕೂಡ ತನ್ನ ಪ್ರಜೆಯೊಬ್ರನ್ನ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಮಹಿಳೆಯನ್ನ ಕಳುಹಿಸಿರಲಿಲ್ಲ. ನೌರಾ-ಅಲ್-ಮಾತ್ರೋಶಿ ಅನ್ನೋ ಮಹಿಳಾ ಗಗನಯಾತ್ರಿಗೆ ತರಬೇತಿ ಕೊಡಲಾಗಿದೆ ಅಂತ ಯುಎಇ ಘೋಷಣೆ ಮಾಡಿತ್ತು. ಆದ್ರೆ ಈಗ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರೋ ಸೌದಿ ಅಂತರಿಕ್ಷಕ್ಕೆ ಮಹಿಳಾ ಪ್ರಜೆಯನ್ನೇ ಕಳುಹಿಸೋದಕ್ಕೆ ಮುಂದಾಗಿದೆ. ಸೌದಿಯಲ್ಲಿ ಡಿಫ್ಯಾಕ್ಟೋ ರೂಲರ್‌ ಆಗಿ ಮಹ್ಮದ್‌ ಬಿನ್‌ ಸಲ್ಮಾನ್‌ ಅಧಿಕಾರಕ್ಕೆ ಬಂದ್ಮೇಲೆ ಈ ರೀತಿಯ ಗಮನಾರ್ಹ ಬೆಳವಣಿಗಳು ನಡೀತಾ ಇವೆ. ಮಹಿಳೆಯರಿಗೆ ಡ್ರೈವಿಂಗ್‌ ಲೈಸೆನ್ಸ್‌ ಕೊಡೋದ್ರಿಂದ ಆರಂಭವಾಗಿ ಈಗ ಅಂತರಿಕ್ಷಕ್ಕೂ ಕಳುಹಿಸುವ ಎಲ್ಲಾ ಪ್ರಯತ್ನಗಳು ಸಹ ಅಲ್ಲಿ ನಡೀತಾ ಇವೆ. ಆದ್ರೆ ಪಕ್ಕದಲ್ಲೇ ಇರೋ ಇರಾನ್‌, ಅಫ್ಥಾನಿಸ್ತಾನದಲ್ಲಿ ಮಹಿಳೆಯರಿಗೆ ಹೊರಗೂ ಬರದ ಸ್ಥಿತಿ ಇದೆ.

-masthmagaa.com

Contact Us for Advertisement

Leave a Reply