7 ವರ್ಷಗಳ ಬಳಿಕ ಇರಾನ್‌ಗೆ ಭೇಟಿ ನೀಡಿದ ಸೌದಿಯ ಸಚಿವ!

masthmagaa.com:

ಸೌದಿ ಅರೆಬಿಯಾ ಹಾಗೂ ಇರಾನ್‌ ತಮ್ಮ ನಡುವಿನ 7 ವರ್ಷಗಳ ಬಿಕ್ಕಟ್ಟನ್ನ ಮರೆತು ಮತ್ತೆ ಉತ್ತಮ ಸಂಬಂಧ ಬೆಳೆಸೋಕೆ ಮುಂದಾಗಿದ್ದವು. ಇದೀಗ ಅದರ ಭಾಗವಾಗಿ ಸೌದಿಯ ವಿದೇಶಾಂಗ ಸಚಿವ ಪ್ರಿನ್ಸ್‌ ಫೈಸಲ್‌ ಬಿನ್‌ ಫರ್ಹಾನ್‌ ನಿನ್ನೆ ಇರಾನ್‌ಗೆ ಆಗಮಿಸಿದ್ದಾರೆ. ಈ ವೇಳೆ ಇರಾನ್‌ ಅಧಿಕಾರಿಗಳನ್ನ ಹಾಗೂ ಅಧ್ಯಕ್ಷ ಇಬ್ರಾಹಿಮ್‌ ರೈಸಿ ಅವ್ರನ್ನ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಸುನ್ನಿ ಮುಸ್ಲಿಂ ಸಮುದಾಯ ಹೊಂದಿರುವ ಸೌದಿ, 2016ರಲ್ಲಿ ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಧರ್ಮಗುರು ನಿಮ್ರ ಅಲ್‌ ನಿಮ್ರ ಅವ್ರನ್ನ ಗಲ್ಲಿಗೇರಿಸಿತ್ತು. ಆ ಟೈಮಲ್ಲಿ ಇರಾನ್‌ನಲ್ಲಿರೊ ಸೌದಿಯ ರಾಯಭಾರ ಕಚೇರಿ ಮೇಲೆ ಆಕ್ರಮಣ ಮಾಡಲಾಗಿತ್ತು. ಆಗ ಸೌದಿ ಇರಾನ್‌ ಜೊತೆಗಿನ ಎಲ್ಲ ಸಂಬಂಧಗಳನ್ನ ಅಂತ್ಯಗೊಳಿಸಿತ್ತು. ಆದಾದ ಬಳಿಕ ಇತ್ತೀಚೆಗೆ ಮತ್ತೆ ರಾಜತಾಂತ್ರಿಕ ಸಂಬಂಧವನ್ನ ಮುಂದುವರೆಸೋದಾಗಿ ಉಭಯ ರಾಷ್ಟ್ರಗಳು ಹೇಳಿದ್ದವು. ಅದರಂತೆ ಈಗ ಸೌದಿ ವಿದೇಶಾಂಗ ಸಚಿವ ಇರಾನ್‌ಗೆ ಭೇಟಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply