masthmagaa.com:

ಕೊರೋನಾಗೆ ಸಂಬಂಧಿಸಿದಂತೆ ಜನಸಾಮಾನ್ಯರ ನಡವಳಿಕೆ ಖಂಡಿತವಾಗಿ ಬದಲಾಗಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ ಅಂತ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಸಿದ್ದಾರೆ. ಸರ್ಕಾರ ಏನ್ ಮಾಡ್ಬೋದು..? ಚಿಕಿತ್ಸೆ ಕೊಡಬಹುದು, ಲಸಿಕೆ ಹಾಕಬಹುದು. ಕೊರೋನಾ ಕಂಟ್ರೋಲ್ ಮಾಡಲು ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಜನ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು. ದೇವರ ಜಾತ್ರೆ ಅನ್ಕೊಂಡು ಕೊರೋನಾವೇನು ರಿಯಾಯಿತಿ ಕೊಡಲ್ಲ. ಅಲ್ಲಿಗೂ ಬರುತ್ತೆ ಎಂದಿದ್ದಾರೆ.

ಇನ್ನು ಶಾಲಾ-ಕಾಲೇಜುಗಳ ಬಂದ್ ಮಾಡಬೇಕೋ ಅಥವಾ ಮುಂದುವರಿಸಬೇಕೋ ಅನ್ನೋ ಬಗ್ಗೆ ಆರೋಗ್ಯ ಇಲಾಖೆ ಯಾವ ರೀತಿಯ ಸಲಹೆ ನೀಡಬೇಕೋ ಅದನ್ನ ಮುಖ್ಯಮಂತ್ರಿಗಳಿಗೆ ನೀಡ್ತೀವಿ. ಮಕ್ಕಳ ಭವಿಷ್ಯ ರೂಪಿಸೋದು ನಮ್ಮ ಜವಾಬ್ದಾರಿ. ಅದಕ್ಕಿಂತ ಮಕ್ಕಳ ಯೋಗಕ್ಷೇಮ ಮುಖ್ಯ ಅಂತ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಈ ಮೂಲಕ ಶಾಲೆಗಳು ಬಂದ್ ಆಗಬಹುದು ಅನ್ನೋ ಮುನ್ಸೂಚನೆ ಕೊಟ್ಟಿದ್ದಾರೆ ರಾಜ್ಯದ ಆರೋಗ್ಯ ಸಚಿವರು.

-masthmagaa.com

Contact Us for Advertisement

Leave a Reply