65 ಸಾವಿರ ವರ್ಷಗಳ ಹಿಂದಿನ ಪೇಂಟಿಂಗ್ ಪತ್ತೆ!

masthmagaa.com:

ನಿಯಾಂಡರ್ತಲ್ ಸ್ಪೇಷೀಸ್​​ ಹೋಮೋ ಸೆಫಿಯನ್ನರಾದ ನಮಗೆ ಹತ್ತಿರದವರು, ಪೂರ್ವಜರು ಅಂತ ಕರೆಯಲಾಗುತ್ತೆ. ಇದೀಗ ಅವರು 65 ಸಾವಿರ ವರ್ಷಗಳ ಹಿಂದೆ ಮಾಡಿದ್ದ ಪೇಂಟಿಂಗ್ ಒಂದು ಪತ್ತೆಯಾಗಿದ್ದು, ಸಂಶೋಧಕರನ್ನೇ ಚಕಿತಗೊಳಿಸಿದೆ. ಸ್ಪೇನ್​​ನ ಮಲಗಾದ ಗುಹೆಯೊಂದರಲ್ಲಿ ಸ್ಟಾಲಾಗ್ಮೈಟ್ ಪತ್ತೆಯಾಗಿದ್ದು, ಅದ್ರ ಮಧ್ಯದಲ್ಲಿ ಕೆಂಬಣ್ಣದ ಕಾವಿ ಮಣ್ಣಿನಿಂದ ಮಾಡಲಾದ ಪೇಂಟಿಂಗ್ ಪತ್ತೆಯಾಗಿದೆ. ಸ್ಟಾಲಾಗ್ಮೈಟ್ ಅಂದ್ರೆ ಬೆಟ್ಟ ಗುಡ್ಡಗಳ ನಡುವೆ ಇರೋ ಗುಹೆಗಳಲ್ಲಿ ನೀರು ಬೀಳುತ್ತಾ ಇರುತ್ತೆ. ಹೀಗೆ ನೀರು ಬೀಳುವಾಗ ಅದ್ರಲ್ಲಿ ಲವಣಾಂಶಗಳಿರುತ್ತವೆ. ಇದ್ರಿಂದ ನೀರು ಬಿದ್ದು ಬಿದ್ದು ಅಲ್ಲೆ ಕಲ್ಲಿನ ರಚನೆ ನಿರ್ಮಾಣವಾಗುತ್ತೆ. ನೋಡಿ ಇಲ್ಲಿ ಪಕ್ಕದಲ್ಲಿ ದೃಶ್ಯದಲ್ಲಿ ನೀವು ನೋಡ್ತಿದ್ದೀರಲ್ವಾ ಆ ರೀತಿ ಇರುತ್ತೆ. ಈ ಮೂಲಕ ನಿಯಾಂಡರ್ತಲ್​​ಗಳೇ ಮೊದಲ ಕಲಾವಿದರು ಅಂತ ಪರಿಗಣಿಸಬಹುದಾಗಿದೆ.

-masthmagaa.com

Contact Us for Advertisement

Leave a Reply