180 ವರ್ಷ ಆಯಸ್ಸು! ಬದಲಾಗುತ್ತಾ ಕಲಿಯುಗ?

masthmagaa.com:

ಸಾಮಾನ್ಯವಾಗಿ ಮನುಷ್ಯ ಎಷ್ಟು ವರ್ಷ ಬದುಕ್ತಾನೆ ಅಂತ ನಮಗೆಲ್ಲಾ ಗೊತ್ತೇ ಇದೆ. ಬರ್ತಾ ಬರ್ತಾ ಮನುಷ್ಯನ ಜೀವಿತಾವಧಿ ಕಡಿಮೆ ಆಗ್ತಾನೇ ಬರ್ತಿದೆ. ಆದ್ರೆ ಕೆನಡಾದ ಹೆಚ್​​ಇಸಿ ಮೋಂಟ್ರಿಯಲ್ ವಿಜ್ಞಾನಿಗಳು 2100ರ ವೇಳೆಗೆ ಮನುಷ್ಯರ ಆಯಸ್ಸು ಜಾಸ್ತಿಯಾಗುತ್ತೆ. ಆಗ ಜನ 180 ವರ್ಷಗಳ ಕಾಲ ಬದುಕ್ತಾರೆ. ಈ ಹಿಂದಿನ ಹೆಚ್ಚು ವರ್ಷ ಬದುಕಿದವರ ದಾಖಲೆ ಮುರಿಯುತ್ತಾರೆ ಅಂತ ಹೇಳಿದ್ದಾರೆ. ಹಿಂದೂ ಪುರಾಣ ಗ್ರಂಥಗಳಲ್ಲಿ ಬೇರೆ ಬೇರೆ ಯುಗಗಳಲ್ಲಿ ಮನುಷ್ಯರ ಆಯಸ್ಸಿನ ಬಗ್ಗೆ ಕೂಡ ಉಲ್ಲೇಖ ಇದೆ. ಸತ್ಯಯುಗದಲ್ಲಿ ಮನುಷ್ಯ 1 ಲಕ್ಷ ವರ್ಷ, ರಾಮನಿದ್ದ ತ್ರೇತಾಯುಗದಲ್ಲಿ 10 ಸಾವಿರ ವರ್ಷ, ಕೃಷ್ಣನಿದ್ದ ದ್ವಾಪರಯುಗದಲ್ಲಿ 1 ಸಾವಿರ ವರ್ಷ ಮತ್ತು ಕಲಿಯುಗದಲ್ಲಿ 100 ವರ್ಷಕ್ಕೆ ಇಳಿಕೆಯಾಗುತ್ತೆ ಅಂತ ಹೇಳಲಾಗಿದೆ. ಆದ್ರೀಗ ವೈದ್ಯಲೋಕದ ಅಭಿವೃದ್ಧಿಯಿಂದ ಮನುಷ್ಯರ ಜೀವಿತಾವಧಿ 180 ವರ್ಷಕ್ಕೆ ಏರಿಕೆಯಾಗುತ್ತೆ ಅಂತ ಕೆನಡಾದ ವಿಜ್ಞಾನಿಗಳು ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ.. ಈ ವೇಳೆ ವಯೋಸಹಜ ರೋಗಗಳು ಕೂಡ ಜಾಸ್ತಿ ಇರುತ್ತೆ. ಆಸ್ಪತ್ರೆ ಬಿಲ್ ಕೂಡ ಜಾಸ್ತಿ ಇರುತ್ತೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ 1997ರಲ್ಲಿ ಮೃತಪಟ್ಟ ಫ್ರಾನ್ಸ್​ನ ಜೀನ್ ಕಾಲ್ಮೆಂಟ್ ಅನ್ನೋ ಹೆಸರಿನ ಮಹಿಳೆ 122 ವರ್ಷ ಬದುಕಿದ್ರು. ಇದು ಈವರೆಗಿನ ಅತಿ ಹೆಚ್ಚು ವರ್ಷ ಬದುಕಿದ ದಾಖಲೆಯಾಗಿತ್ತು.

-masthmagaa.com

Contact Us for Advertisement

Leave a Reply